ಹ್ಯಾಂಗ್ ಝೌ: ಏಷ್ಯನ್ ಗೇಮ್ಸ್ 2023ರಲ್ಲಿ ಭಾರತ 41 ವರ್ಷಗಳ ಬಳಿಕ ಈಕ್ವೆಸ್ಟ್ರಿಯನ್ ಕ್ರೀಡೆಯಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದೆ.
ಅನುಷ್ ಅಗರ್‍ವಾಲಾ, ಹೃದಯ್ ವಿಪುಲ್, ದಿವ್ಯಾಕೃತಿ ಮತ್ತು ಸುದೀಪ್ತಿ ಹಜೇಲಾ ಅವರನ್ನೊಳಗೊಂಡ ಭಾರತ ತಂಡ 209.20 ಸ್ಕೋರ್ ದಾಖಲಿಸಿತು. ಈ ಮೂಲಕ ಡ್ರೆಸ್ಸೇಜ್ ಈವೆಂಟ್‍ನಲ್ಲಿ ಇದೇ ಮೊದಲು ಚಿನ್ನದ ಪದಕವನ್ನು ಗೆದ್ದು ಇತಿಹಾಸ ದಾಖಲಿಸಿತು.
ಚೀನಾ 204.882 ಅಂಕಗಳೊಂದಿಗೆ ಎರಡನೇ ಸ್ಥಾನವನ್ನು ಗಳಿಸಿತು. ಹಾಂಗ್ ಕಾಂಗ್ 204.852 ಅಂಕಗಳೊಂದಿಗೆ ಕಂಚಿನ ಪದಕ ಗೆದ್ದಿತು.