ಧರ್ಮಶಿಕ್ಷಣದ ಕೊರತೆಯಿಂದ ನಮ್ಮ ಹಿರಿಯರು ತಿಳಿಸಿದ ಧಾರ್ಮಿಕ ಆಚರಣೆಗಳು ಇಂದು ದೂರ ಸಾಗುತ್ತಿವೆ. – ಶ್ರೀ. ಜಿ. ಗೋಪಾಲಕೃಷ್ಣ ಉಪಾಧ್ಯಾಯ, ಆಡಳಿತ ಮುಕ್ತೇಸ್ತರರು ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನ, ಮಾಚಾರು.

By: Ommnews

Date:

Share post:

ದಿನಾಂಕ 31 ಡಿಸೆಂಬರ್ 2023 ರಂದು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಬೆಳ್ತಂಗಡಿ ತಾಲೂಕಿನ ಉಜಿರೆ ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನ, ಕೋರ್ಯಾರು ಗುತ್ತು ಮಾಚಾರಿನಲ್ಲಿ ಬೆಳಿಗ್ಗೆ 10.30 ಕ್ಕೆ ಹಿಂದೂ ರಾಷ್ಟ್ರ ಜಾಗೃತಿ ಸಭೆಯನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಜಿ. ಗೋಪಾಲಕೃಷ್ಣ ಉಪಾಧ್ಯಾಯರವರು ಮಾತನಾಡುತ್ತಾ,ಇಂದು ನಾವೆಲ್ಲರೂ ಹಿಂದೂ ಧರ್ಮದ ಬಗ್ಗೆ ಎಷ್ಟು ತಿಳಿದಿದ್ದೇವೆ ಎಂಬುವುದು ಮುಖ್ಯ ಇದೆ. ದೇವಸ್ಥಾನಕ್ಕೆ ಹೋಗುವಾಗ ಸಾತ್ವಿಕ ವಸ್ತ್ರ ಧರಿಸದೆ ಮನಸ್ಸಿಗೆ ಬಂದ ವೇಷ ಭೂಷಣಗಳಿಂದ ದೇವಸ್ಥಾನಕ್ಕೆ ಹೋಗುತ್ತೇವೆ. ಅಂದರೆ ನಮಗೆ ಅಲ್ಲಿನ ಪಾವಿತ್ರ್ಯದ ಬಗ್ಗೆ ಗಮನವಿರುವುದಿಲ್ಲ. ನೂತನ ಮನೆಯ ಗೃಹಪ್ರವೇಶಕ್ಕೆ ಮೊದಲಿಗೆ ಗೋಮಾತೆಯ ಪೂಜೆ ಮಾಡುವ ಮಹತ್ವವೇನು, ಮನೆಯಲ್ಲಿ ಗಣಹೋಮ ಮಾಡುವ ಉದ್ದೇಶವೇನು ಇದರ ಬಗ್ಗೆ ಜ್ಞಾನವಿಲ್ಲದ ಕಾರಣ ಮತ್ತು ಧರ್ಮಶಿಕ್ಷಣದ ಅಭಾವದಿಂದ ಹಿರಿಯರು ತಿಳಿಸಿಕೊಟ್ಟ ಧಾರ್ಮಿಕ ಆಚರಣೆಗಳಿಂದ ನಾವೆಲ್ಲರೂ ದೂರ ದೂರ ಸಾಗುತ್ತಿದ್ದೇವೆ. ಅದಕ್ಕಾಗಿ ಎಲ್ಲ ಹಿಂದೂಗಳು ಧರ್ಮಶಿಕ್ಷಣ ಪಡೆಯಬೇಕು ಎಂದು ತಿಳಿಸಿದರು.

Advertisement
Advertisement
Advertisement

ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡುವ ಮೊದಲು ಹಿಂದೂ ರಾಷ್ಟ್ರ ಮಾಡಬೇಕಾಗಿದೆ !ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಶ್ರೀ. ವಿಜಯಕುಮಾರ್ ರವರು ಮಾತನಾಡುತ್ತಾ, ಇಂದು ಪ್ರಪಂಚದಾದ್ಯಂತ ಇತರ ಮತದವರಿಗೆ ಅವರದ್ದೇ ಆದ ದೇಶಗಳಿವೆ. ಉದಾಹರಣೆಗೆ 152 ಕ್ರೈಸ್ತ ದೇಶಗಳು, 52 ಇಸ್ಲಾಂ ದೇಶಗಳು, 12 ಬೌದ್ಧ ದೇಶಗಳು, 01 ಯಹೂದಿ ದೇಶ ಇದೆ. ಆದರೆ 100 ಕೋಟಿಗಿಂತಲೂ ಹೆಚ್ಚು ಜನಸಂಖ್ಯೆ ಇರುವ ಹಿಂದೂಗಳಿಗೆ ಅವರದೇ ಆದ ದೇಶ ಇಲ್ಲ. ಭಾರತ ದೇಶ ಹಿಂದೂ ದೇಶವಾಗಿದ್ದರು ಅದು ಈಗ ಜಾತ್ಯಾತೀತ ದೇಶವಾಗಿದೆ.

ಇತರ ಮತೀಯರು ಭಾರತವನ್ನು 2047 ನೇ ಇಸವಿಯಲ್ಲಿ ಇಸ್ಲಾಂ ರಾಷ್ಟ್ರ ಮಾಡ್ತೇವೆ ಎಂದು ಹೇಳುತ್ತಿದ್ದಾರೆ. ಅಲ್ಲದೆ ಅವರು ಅದಕ್ಕಾಗಿ ಪ್ರಯತ್ನ ಮಾಡುತ್ತಿದ್ದಾರೆ. ಹಿಂದೂ ಮುಖಂಡರ ಹತ್ಯೆ, ಲವ್ ಜಿಹಾದ್, ಮತಾಂತರ, ಭಯೋತ್ಪಾದನೆ, ಭಾರತ ಆರ್ಥಿಕತೆಯನ್ನು ಬುಡಮೇಲು ಮಾಡುವ ಹಲಾಲ್, ಲ್ಯಾಂಡ್ ಜಿಹಾದ್ ಈ ರೀತಿ ಅವರ ಪ್ರಯತ್ನಗಳು ಆಗುತ್ತಿದ್ದರೂ ನಮ್ಮ ಹಿಂದೂಗಳು ಸ್ವಂತ ವಿಚಾರದಲ್ಲಿಯೇ ಮುಳುಗಿದ್ದೇವೆ. ಅದಕ್ಕಾಗಿ ಹಿಂದೂ ಜನಜಾಗೃತಿ ಸಮಿತಿ ಹಿಂದೂ ರಾಷ್ಟ್ರ ಜಾಗೃತಿ ಸಭೆಗಳನ್ನು ಮಾಡಿ ಹಿಂದೂಗಳಿಗೆ ಆತ್ಮಸ್ಥೈರ್ಯವನ್ನು ತುಂಬಿಸುವ ಪ್ರಯತ್ನ ಮಾಡುತ್ತಿದೆ. ಅದಕ್ಕಾಗಿ ಧರ್ಮಶಿಕ್ಷಣ, ಧರ್ಮಜಾಗೃತಿ, ಧರ್ಮರಕ್ಷಣೆ. ರಾಷ್ಟ್ರರಕ್ಷಣೆ ಕಾರ್ಯದಲ್ಲಿ ಹಿಂದೂಗಳನ್ನು ಸಕ್ರಿಯಗೊಳಿಸಲಾಗುತ್ತಿದೆ ಎಂದು ಹೇಳಿದರು. ಇಂದು ನಾವು ಧರ್ಮದ ಅಸ್ತಿತ್ವಕ್ಕಾಗಿ ಹೋರಾಡಬೇಕಾಗಿದೆ. ಇಂತಹ ಹೋರಾಟವನ್ನು ಮಾಡಲು ಭಗವಂತನ ಅಧಿಷ್ಠಾನವಿರಬೇಕು. ಅದಕ್ಕಾಗಿ ಪ್ರತಿಯೊಬ್ಬ ಹಿಂದೂ ಧರ್ಮಶಿಕ್ಷಣವನ್ನು ಪಡೆದು ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಈ ಸಭೆಯಲ್ಲಿ ಸುಮಾರು 130 ಕ್ಕೂ ಅಧಿಕ ಹಿಂದೂ ಬಾಂಧವರು ಉಪಸ್ಥಿತರಿದ್ದರು.

ಶ್ರೀ. ವಿಜಯಕುಮಾರ್, ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ. 8296846386

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section