ಹಿಂದೂಗಳ ಜಾಗೃತಿಗಾಗಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿತ ಹಿಂದೂ ರಾಷ್ಟ್ರ-ಜಾಗೃತಿ ಸಭೆ !

By: Ommnews

Date:

Share post:

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !

Advertisement
Advertisement
Advertisement

ಇಂದು ಜಗತ್ತಿನಲ್ಲಿ 157 ಕ್ರೈಸ್ತ, 52 ಮುಸ್ಲಿಂ, 12 ಬೌದ್ಧ ಮತ್ತು 1 ಯಹೂದಿ ರಾಷ್ಟ್ರಗಳಿವೆ; ಆದರೆ ಹಿಂದೂಗಳಿಗೆ ಒಂದೇ ಒಂದು ರಾಷ್ಟ್ರವಿಲ್ಲ. ‘ಜಾತ್ಯತೀತ’ ಭಾರತದ 9 ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ಜಾತ್ಯತೀತ ಸರಕಾರವು ದೇವಾಲಯಗಳನ್ನು ಸ್ವಾಧೀನಪಡಿಸಿಕೊಳ್ಳುತ್ತದೆ ಮತ್ತು ಹಿಂದೂಗಳ ತೀರ್ಥಯಾತ್ರೆಗಳ ಮೇಲೆ ತೆರಿಗೆಯನ್ನು ಹೇರುತ್ತದೆ. ‘ಲವ್ ಜಿಹಾದ್’, ‘ಉಗುಳು ಜಿಹಾದ್’ ಮುಂತಾದ ಷಡ್ಯಂತ್ರಗಳು ಬಯಲಾಗುತ್ತಿವೆ.

ತಮಿಳುನಾಡಿನ ವಿದ್ಯಾರ್ಥಿನಿ ‘ಲಾವಣ್ಯ’ಳು ಮತಾಂತರದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು. ಕರ್ನಾಟಕದಲ್ಲಿ ಹಿಜಾಬ್ ವಿರುದ್ಧ ಪ್ರತಿಭಟನೆ ನಡೆಸಿದ ಹರ್ಷ, ಉತ್ತರಪ್ರದೇಶದಲ್ಲಿ ಕಮಲೇಶ್ ತಿವಾರಿ,ಗುಜರಾತಿನಲ್ಲಿ ಕಿಶನ್ ಭರ್ವಾಡ್ ಮೊದಲಾದ ಹಿಂದೂ ನಾಯಕರ ಹತ್ಯೆಯಾಗುತ್ತಿದೆ. ಈ ಸಮಸ್ಯೆಗಳಿಗೆ ಪರಿಹಾರವೆಂದು ಭಾರತದಲ್ಲಿ ‘ಹಿಂದೂ ರಾಷ್ಟ್ರ’ ಸ್ಥಾಪಿಸುವುದು ಆವಶ್ಯಕವಾಗಿದೆ. ಆದುದರಿಂದ ಹಿಂದೂ ರಾಷ್ಟ್ರದ ಆವಶ್ಯಕತೆಯ ಬಗ್ಗೆ ಜಾಗೃತಿ ಮೂಡಿಸಲು ದಿನಾಂಕ07/01/2024. ರವಿವಾರ ದಂದು ಮುಟ್ಟು ಮೊಗವೀರ ಮಹಾಸಭಾ ಮಟ್ಟು ಪಟ್ನ ಹೆಜಮಾಡಿ ಇದರ ಅಂಗ ಸಂಸ್ಥೆಯಾದ ವಿದ್ಯಾದಾಹಿನಿ ಯುವಕ ಯುವತಿ ವೃಂದ ಮಟ್ಟು ಪಟ್ನ ಹೆಜಮಾಡಿ ಹಾಗೂ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಹೆಜಮಾಡಿ ಬಿಲ್ಲವರ ಸಂಘ (ರಿ)ಹೆಜಮಾಡಿ ಸುವರ್ಣ ಸಭಾಗೃಹದಲ್ಲಿ ಸಾಯಂಕಾಲ 04.00 ಗಂಟೆಗೆ ‘ಹಿಂದೂ ರಾಷ್ಟ್ರ-ಜಾಗೃತಿ ಸಭೆಯ ಆಯೋಜನೆ ಮಾಡಲಾಗಿದೆ.

ಛತ್ರಪತಿ ಶಿವಾಜಿ ಮಹಾರಾಜರು ಮುಷ್ಟಿಯಷ್ಟು ಮಾವಳೆ (ಮರಾಠ ಸೈನಿಕರು) ಯರೊಂದಿಗೆ ‘ಹಿಂದವೀ ಸ್ವರಾಜ’ ಸ್ಥಾಪಿಸಬಹುದಾದರೆ, 100 ಕೋಟಿ ಹಿಂದೂಗಳ ಒಗ್ಗಟ್ಟಿನಿಂದ ಭಾರತವನ್ನು ‘ಹಿಂದೂ ರಾಷ್ಟ್ರ’ವೆಂದು ಘೋಷಿಸಲು ಖಂಡಿತವಾಗಿಯೂ ಒತ್ತಾಯಿಸಬಹುದು ! ಈ ಹಿಂದೂ ರಾಷ್ಟ್ರ-ಜಾಗೃತಿ ಸಭೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ ಚಂದ್ರ ಮೊಗೇರ ಇವರು ವಕ್ತಾರರಾಗಿ ಭಾಗವಹಿಸಲಿದ್ದಾರೆ.

ಸಂವಿಧಾನಬದ್ಧವಾಗಿ ಹಿಂದೂ ರಾಷ್ಟ್ರವನ್ನು ಸಾಕಾರಗೊಳಿಸುವಲ್ಲಿ ನಮ್ಮೆಲ್ಲರ ಪಾತ್ರವನ್ನು ತಿಳಿದುಕೊಳ್ಳಲು ಈ ಸಭೆಗೆ ತಮ್ಮ ಪರಿವಾರ ಸಮೇತರಾಗಿ ತಪ್ಪದೇ ಉಪಸ್ಥಿತರಾಗಿರಿ ಹಾಗೂ ತಮ್ಮ ಧರ್ಮಕರ್ತವ್ಯವನ್ನು ನಿಭಾಯಿಸಿ !

ತಮ್ಮ ವಿಶ್ವಾಸಿ, ಶ್ರೀ ವಿಜಯಕುಮಾರ್, ಹಿಂದೂ ಜನಜಾಗೃತಿ ಸಮಿತಿ, ಸಮನ್ವಯಕರು, ದಕ್ಷಿಣ ಕನ್ನಡ ಜಿಲ್ಲೆ ಸಂಪರ್ಕ : 8296846386

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section