ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ ಮನವಿಯನ್ನು ಮಾನ್ಯ ಜಿಲ್ಲಾ ಧಿಕಾರಿ ಮುಲ್ಲೈ ಮುಗಿಲನ್ ಇವರ ಮಾಧ್ಯಮ ದಿಂದ ಮುಖ್ಯ ಮಂತ್ರಿಗೆ ತಲುಪಿಸಬೇಕಾಗಿ ಪ್ರಶಾಂತ್ ಪೂಜಾರಿ ಯವರ ತಾಯಿ ಯಶೋದಾ ಪೂಜಾರ್ತಿ ಹಾಗೂ ದೀಪಕ್ ರಾವ್ ಅವರ ತಾಯಿ ಪ್ರೇಮ ರಾವ್ ವಿನಂತಿ ಮಾಡಿದರು.
ಜಿಲ್ಲಾಧಿಕಾರಿಗಳಿಗೆ ನೀಡಿದ ಮನವಿ
2015 ರಲ್ಲಿ ಪ್ರಶಾಂತ್ ಪೂಜಾರಿಯ ಕೊಲೆಯು ನಡೆದಿದ್ದು ಹಾಗೆಯೆ 2019 ರಲ್ಲಿ ದೀಪಕ್ ರಾವ್ ಕೊಲೆಯು ನಡೆದಿದ್ದು. ಈ ಪ್ರಕರಣದ ತನಿಖೆಯು ಶೀಘ್ರವಾಗಿ ನಡೆದು ಅಪರಾಧಿಗಳಿಗೆ ಶಿಕ್ಷೆಯಾಗುವುದು ಎಂಬ ನಿರೀಕ್ಷೆಯಲ್ಲಿದ್ದೆವು. ಆದರೆ ನ್ಯಾಯಾಲಯದಲ್ಲಿ ತನಿಖೆಯು ನಮ್ಮ ನಿರೀಕ್ಷೆಯಂತೆ ಶೀಘ್ರಗತಿಯಲ್ಲಿ ನಡೆಯುತ್ತಿಲ್ಲ.
ಇತ್ತೀಚೆಗೆ ನಾನು ಪತ್ರಿಕಾ ಮಾಧ್ಯಮದ ಮೂಲಕ ಗಮನಿಸಿದ ವಿಷಯವೇನಂದರೆ, ಗೌರಿ ಲಂಕೇಶ್ ಮತ್ತು ಕಲಬುರ್ಗಿ ಹತ್ಯೆ ಪ್ರಕರಣವನ್ನು ತಾವು ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಿ ಶೀಘ್ರಗತಿಯಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಮಾಡುವುದಾಗಿ ಭರವಸೆ ನೀಡಿರುವುದು ಶ್ಲಾಘನೀಯವಾಗಿದೆ. ಹಾಗೆಯೇ ತಾವುಗಳು ದೀಪಕ್ ರಾವ್ ಹಾಗೂ ಪ್ರಶಾಂತ್ ಪೂಜಾರಿಯ ಕೊಲೆ ಪ್ರಕರಣವನ್ನು ವಿಶೇಷ ನ್ಯಾಯಾಲಯದ ಮೂಲಕ ತನಿಖೆ ನಡೆಸಿ ಅಪರಾಧಿಗಳನ್ನು ಶೀಘ್ರವಾಗಿ ಶಿಕ್ಷೆಗೆ ಒಳಪಡಿಸಿ ನನ್ನ ಮಗನಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇನೆ.
ಇತಿ ತಮ್ಮ ವಿಶ್ವಾಸಿ, ಯಶೋದಾ ಪೂಜಾರ್ತಿ ಪ್ರೇಮಾ ರಾವ್
Photo ಕ್ಯಾಪ್ಶನ್

- – ಜಿಲ್ಲಾಧಿಕಾರಿಗಳಿಗೆ ಮನವಿ ನೀಡುವ ದೀಪಕ್ ರಾವ್ ಅವರ ತಾಯಿ ಪ್ರೇಮ ರಾವ್ ಮತ್ತೆ ಚಿಕಪ್ಪ ಸರತೋಜಿ

- – ಜಿಲ್ಲಾಧಿಕಾರಿಗಳಿಗೆ ಮನವಿ ನೀಡುವ ಪ್ರಶಾಂತ್ ಪೂಜಾರಿ ಅವರ ತಾಯಿ ಯಶೋದಾ ಪೂಜಾರ್ತಿ