ಅತಿಯಾದ ಉಪ್ಪು ಸೇವನೆಯಿಂದ ಅಧಿಕ ರಕ್ತದೊತ್ತಡ ಮಾತ್ರವಲ್ಲ ಈ ಕಾಯಿಲೆಗೂ ಬರಬಹುದು

By: Ommnews

Date:

Share post:

ಉಪ್ಪಿಗಿಂತ ರುಚಿಯಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಪರಮಸತ್ಯ. ಉಪ್ಪು ಇಲ್ಲದೆ ಯಾವುದೇ ಆಹಾರವನ್ನು ತಿನ್ನುವುದು ತುಂಬಾ ಕಷ್ಟ. ಹೀಗಾಗಿಯೇ ಮದುವೆ ಸೇರಿದಂತೆ ಯಾವುದೇ ಕಾರ್ಯಕ್ರಮಗಳಿಗೆ ಹೋದರೆ ಊಟದ ಎಲೆಯಲ್ಲಿ ಮೊದಲು ಬಡಿಸುವ ಪದಾರ್ಥವೇ ಉಪ್ಪು. ಹೋಟೆಲ್ಗಳಲ್ಲೂ ಒಂದು ಡಬ್ಬಿಯಲ್ಲಿ ಉಪ್ಪನ್ನು ಇಟ್ಟಿರುತ್ತಾರೆ. ಉಪ್ಪು ಬೇಕೆ ಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಉಪ್ಪನ್ನು ಅತಿಯಾಗಿ ಸೇವನೆ ಮಾಡುತ್ತಿದ್ದಾರೆ. ಆದರೆ, ಇದು ತುಂಬಾ ಅಪಾಯಕಾರಿ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.

Advertisement
Advertisement
Advertisement

ಅತಿ ಉಪ್ಪಿನಾಂಶ ಇರುವ ಆಹಾರ ಪದಾರ್ಥವನ್ನು ಪ್ರತಿದಿನ ಸೇವಿಸಿದರೆ, ಅಧಿಕ ರಕ್ತದೊತ್ತಡ ಮತ್ತು ಗಂಭೀರ ಜೀರ್ಣಕ್ರಿಯೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಲ್ಲದೆ, ಹೆಚ್ಚುವರಿಯಾಗಿ ರೋಗ ನಿರೋಧಕ ಶಕ್ತಿಯು ಸಹ ಕಡಿಮೆಯಾಗುತ್ತದೆ. ಇದಿಷ್ಟನ್ನು ಹೊರತುಪಡಿಸಿ ಇನ್ನಿತರ ಆರೋಗ್ಯ ಸಮಸ್ಯೆಗಳು ಸಹ ಅತಿಯಾದ ಉಪ್ಪಿನ ಸೇವನೆಯಿಂದ ಬರುತ್ತದೆ.

ರಕ್ತದೊತ್ತಡ: ಆಹಾರದಲ್ಲಿ ಹೆಚ್ಚು ಉಪ್ಪನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹೆಚ್ಚು ಉಪ್ಪು ಸೇವಿಸುವವರು ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳಿಗೆ ಸುಲಭವಾಗಿ ಗುರಿಯಾಗುತ್ತಾರೆ. ಹಾಗಾಗಿ ಹೆಚ್ಚು ಉಪ್ಪನ್ನು ಸೇವಿಸದಿರುವುದು ಉತ್ತಮ ಎನ್ನುತ್ತಾರೆ ಆರೋಗ್ಯ ತಜ್ಞರು

ಹೃದಯ ಸಮಸ್ಯೆಗಳು: ಉಪ್ಪನ್ನು ಅತಿಯಾಗಿ ಸೇವಿಸುವುದರಿಂದ ಹೃದಯದ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ದಿನಕ್ಕೆ ಐದು ಗ್ರಾಂಗಿಂತ ಹೆಚ್ಚು ಉಪ್ಪನ್ನು ಸೇವಿಸುವುದರಿಂದ ಪಾರ್ಶ್ವವಾಯು ಉಂಟಾಗುತ್ತದೆ. ಇದರೊಂದಿಗೆ ಹೃದಯಾಘಾತ, ಪರಿಧಮನಿಯ ಹೃದಯಾಘಾತದಂತಹ ಸಮಸ್ಯೆಗಳೂ ಬರಬಹುದು. ಹಾಗಾಗಿ ಆಹಾರದಲ್ಲಿ ಹೆಚ್ಚು ಉಪ್ಪನ್ನು ತೆಗೆದುಕೊಳ್ಳದಿರುವುದು ಉತ್ತಮ.ನಿರ್ಜಲೀಕರಣ: ಅತಿಯಾಗಿ ಉಪ್ಪನ್ನು ಸೇವಿಸುವುದರಿಂದ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆಯೂ ಉಂಟಾಗುತ್ತದೆ. ದೇಹ ನಿರ್ಜಲೀಕರಣ ಆದಷ್ಟು ಅನೇಕ ಸಮಸ್ಯೆಗಳನ್ನು ನಮ್ಮ ಬಾಧಿಸುತ್ತವೆ. ಉಪ್ಪು ತಿಂದಾಗ ಚಾಯಾರಿಕೆ ಆಗುವುದನ್ನು ನೀವು ಗಮನಿಸಿರುಬಹುದು. ಅದಕ್ಕಾಗಿಯೇ ಹೆಚ್ಚು ಉಪ್ಪು ಸೇವಿಸಬಾರದು.

ಕಿಡ್ನಿ ಸಮಸ್ಯೆಗಳು: ಅತಿಯಾದ ಉಪ್ಪು ಸೇವನೆಯಿಂದ ಕಿಡ್ನಿ ಹಾಳಾಗುವುದಲ್ಲದೆ ಕೆಲವರಲ್ಲಿ ಕಿಡ್ನಿ ವೈಫಲ್ಯಕ್ಕೂ ಕಾರಣವಾಗುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಇದರೊಂದಿಗೆ ಕೆಲವರಲ್ಲಿ ಕಿಡ್ನಿಯಲ್ಲಿ ಕಲ್ಲುಗಳಾಗುವ ಸಂಭವವಿರುತ್ತದೆ. (ಏಜೆನ್ಸೀಸ್)

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section