ಮೊದಲ ಮಗುವಿನ ಸಂಭ್ರಮದಲ್ಲಿ ಜಸ್ಪ್ರೀತ್- ಸಂಜನಾ; ಫೋಟೊ ಹಂಚಿಕೊಂಡ ಕ್ರಿಕೆಟರ್ ಜಸ್ಪ್ರೀತ್ ಬೂಮ್ರಾ

0
95

ಮುಂಬೈ: ಏಷ್ಯಾ ಕಪ್ ಕೂಟದಲ್ಲಿ ಟೀಂ ಇಂಡಿಯಾದ ಭಾಗವಾಗಿದ್ದ ಜಸ್ಪ್ರೀತ್ ಬುಮ್ರಾ ರವಿವಾರ ಸಂಜೆ ಭಾರತಕ್ಕೆ ಮರಳಿದ್ದರು. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಬುಮ್ರಾ ಇದೀಗ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. ಇದೀಗ ಜಸ್ಪ್ರೀತ್ ಬುಮ್ರಾ- ಸಂಜನಾ ಗಣೇಶನ್ ದಂಪತಿಗೆ ಗಂಡು ಮಗುವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಪ್ರಕಟಿಸಿದ್ದಾರೆ.

ನಮ್ಮ ಪುಟ್ಟ ಕುಟುಂಬವು ಬೆಳೆದಿದೆ, ಮತ್ತು ನಮ್ಮ ಹೃದಯಗಳು ನಾವು ಊಹಿಸಲು ಸಾಧ್ಯವಾಗದಷ್ಟು ತುಂಬಿವೆ! ಇಂದು ಬೆಳಿಗ್ಗೆ, ನಾವು ನಮ್ಮ ಪುಟ್ಟ ಹುಡುಗ ಅಂಗದ್ ಜಸ್ಪ್ರೀತ್ ಬುಮ್ರಾ ಅವರನ್ನು ಜಗತ್ತಿಗೆ ಸ್ವಾಗತಿಸಿದ್ದೇವೆ” ಎಂದು ಬುಮ್ರಾ ಬರೆದುಕೊಂಡಿದ್ದಾರೆ.

ಟೀಂ ಇಂಡಿಯಾದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಅವರು 2021ರ ಮಾರ್ಚ್ 15ರಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು.

ಶ್ರೀಲಂಕಾದಲ್ಲಿ ನಡೆಯುತ್ತಿರುವ ಏಷ್ಯಾಕಪ್ ಗೆ ಬುಮ್ರಾ ಟೀಂ ಇಂಡಿಯಾದ ಭಾಗವಾಗಿದ್ದಾರೆ. ಪಾಕ್ ವಿರುದ್ಧದ ಮೊದಲ ಪಂದ್ಯದಲ್ಲಿ ಆಡಿದ್ದ ಬುಮ್ರಾ ರವಿವಾರ ಭಾರತಕ್ಕೆ ಮರಳಿದ್ದರು. ಸೋಮವಾರ ನಡೆಯಲಿರುವ ನೇಪಾಳ ವಿರುದ್ಧದ ಪಂದ್ಯಕ್ಕೆ ಅವರು ಅಲಭ್ಯರಾಗಲಿದ್ದಾರೆ. ಸೂಪರ್ 4 ಪಂದ್ಯಗಳಿಗೆ ಮತ್ತೆ ಅವರು ತಂಡವನ್ನು ಸೇರಲಿದ್ದಾರೆ.

LEAVE A REPLY

Please enter your comment!
Please enter your name here