ನವದೆಹಲಿ: ಭಯೋತ್ಪಾದಕರು ಮತ್ತು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡವರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆಯು (NIA) ತೀವ್ರ ಕಾರ್ಯಾಚರಣೆ ನಡೆಸುತ್ತಿದೆ. ಉತ್ತರದ ರಾಜ್ಯಗಳಲ್ಲಿ ಕಾರ್ಯಚರಿಸುತ್ತಿರುವ ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಆರು ರಾಜ್ಯಗಳಲ್ಲಿ ಇಂದು ಎನ್‌ಐಎ ಪ್ರಮುಖ ದಾಳಿ ನಡೆಸುತ್ತಿದೆ.
ಲಾರೆನ್ಸ್ ಬಿಷ್ಣೋಯ್, ಬಾಂಬಿಹಾ ಮತ್ತು ಅರ್ಷದೀಪ್ ದಲ್ಲಾ ಗ್ಯಾಂಗ್‌ಗಳ ಸಹಚರರಿಗೆ ಸೇರಿದ 51 ಸ್ಥಳಗಳಲ್ಲಿ ದಾಳಿ ನಡೆಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
ದಾಲ ಕಳೆದ 3-4 ವರ್ಷಗಳಿಂದ ಕೆನಡಾದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪಂಜಾಬ್‌ನಲ್ಲಿ ಹಲವು ಹತ್ಯೆಗಳನ್ನು ನಡೆಸಿದ್ದಾನೆ. ಅಲ್ಲದೇ ಭಾರತದಲ್ಲಿ ಭಯೋತ್ಪಾದನೆ, ಹಿಂಸಾಚಾರ ಮತ್ತು ದೊಡ್ಡ ಪ್ರಮಾಣದ ಸುಲಿಗೆಯನ್ನು ದಾಲ ಉತ್ತೇಜಿಸುತ್ತಿದ್ದಾನೆ. ಭಯೋತ್ಪಾದಕ ಗ್ಯಾಂಗ್‌ಸ್ಟರ್ ಸಂಚು ಪ್ರಕರಣದಲ್ಲಿ ಎನ್‌ಐಎ ಇದುವರೆಗೆ 16 ಜನರನ್ನು ಬಂಧಿಸಿದೆ. ಈ ಕುರಿತು ಹೆಚ್ಚಿನ ತನಿಖೆಗಳು ಮುಂದುವರಿಯುತ್ತಿವೆ.