ವಾಷಿಂಗ್ಟನ್: ಜಾಗತಿಕವಾಗಿ ಇಂಟರ್ನೆಟ್ ಅಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ಸರ್ಚ್ ಎಂಜಿನ್ ಗೂಗಲ್ ಇಂದು 25 ವರ್ಷವನ್ನು ಪೂರೈಸಿದೆ. ಬುಧವಾರ ವಿಭಿನ್ನವಾದ ಡೂಡಲ್‌ನೊಂದಿಗೆ ಗೂಗಲ್ ತನ್ನ 25ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದೆ.
ಗೂಗಲ್ ಈ ಬಗ್ಗೆ ತನ್ನ ಬ್ಲಾಗ್‌ನಲ್ಲಿ ಬರೆದುಕೊಂಡಿದೆ. ಕಳೆದ 25 ವರ್ಷಗಳಲ್ಲಿ ಕಂಪನಿ ಬೆಳೆದು ಬಂದ ಹಾದಿ, 1998ರಿಂದ 2023ರ ವರೆಗೆ ತನ್ನ ಬದಲಾದ ಲೋಗೋಗಳನ್ನು ತೋರಿಸುವ ಡೂಡಲ್ ಅನ್ನು ತನ್ನ ಬ್ಲಾಗ್‌ನಲ್ಲಿ ಹಂಚಿಕೊಂಡಿದೆ.
ಗೂಗಲ್‌ನ ಪ್ರಸ್ತುತ ಸಿಇಒ ಸುಂದರ್ ಪಿಚೈ ಅವರು ಕಳೆದ ತಿಂಗಳು ಕಂಪನಿಯ ಹುಟ್ಟುಹಬ್ಬವನ್ನು ಗುರುತಿಸಲು ಟಿಪ್ಪಣಿಯನ್ನು ಬರೆದಿದ್ದರು. ಅವರು ಕಂಪನಿಯ ಪ್ರಯಾಣ, ತಂತ್ರಜ್ಞಾನವನ್ನು ಪರಿವರ್ತಿಸುವಲ್ಲಿ ಅದರ ಪಾತ್ರ ಮತ್ತು ಭವಿಷ್ಯದ ಹಾದಿಯನ್ನು ರೂಪಿಸಿದ ಬಗ್ಗೆ ಮೆಲುಕು ಹಾಕಿದರು. ಗೂಗಲ್‌ನ ಯಶಸ್ಸಿನ ಭಾಗವಾಗಿರುವ ಬಳಕೆದಾರರು, ಉದ್ಯೋಗಿಗಳು ಮತ್ತು ಪಾಲುದಾರರಿಗೆ ಅವರು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಹೊಸತನದ ನಿರಂತರ ಸವಾಲು ಮತ್ತು ಹಿಂದಿನ ಮತ್ತು ಪ್ರಸ್ತುತ ಗೂಗ್ಲರ್‌ಗಳ ಸಮರ್ಪಣೆಗಾಗಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಳೆದ 25 ವರ್ಷಗಳಲ್ಲಿ ಗೂಗಲ್ ಕೇವಲ ಸರ್ಚ್ ಎಂಜಿನ್ ಆಗಿ ಉಳಿದಿರದೇ ಇಮೇಲ್, ಯೂಟ್ಯೂಬ್‌ನಿಂದ ಹಿಡಿದು ಕೃತಕ ಬುದ್ಧಿಮತ್ತೆಯ ಚಾಟ್‌ಬಾಟ್‌ವರೆಗೂ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿ ಬೆಳೆದು ನಿಂತಿದೆ.