ಇಷ್ಟಲಿಂಗ ದೀಕ್ಷೆ ಪಡೆದ ರಷ್ಯಾದ 8 ವರ್ಷದ ಬಾಲಕ

By: Ommnews

Date:

Share post:

ಹುಬ್ಬಳ್ಳಿ: ರಷ್ಯಾದ 8 ವರ್ಷದ ಬಾಲಕ ಕಾಶಿ ಪೀಠದ ಶ್ರೀಗಳಿಂದ ಇಷ್ಟಲಿಂಗ ದೀಕ್ಷೆ ಪಡೆದಿದ್ದಾನೆ. ಈ ಮೂಲಕ ಮಾಸ್ಕೋ ನಿವಾಸಿ ಪಾರ್ವತಿ ಎನ್ನುವವರ ಪುತ್ರ ಆ್ಯಂಡ್ರೆ ಎಂಬ 8 ವರ್ಷದ ಬಾಲಕ ಈಗ ಗಣೇಶನಾಗಿ ಬದಲಾಗಿದ್ದಾನೆ.

Advertisement
Advertisement
Advertisement

ಈ ಹಿಂದೆ ಉತ್ತರ ಕನ್ನಡ ಗೋಕರ್ಣದಲ್ಲಿ ಸಾವಿರಾರು ಜನರು ಕಾಶಿ ಶ್ರೀಗಳಿಂದ ಇಷ್ಟಲಿಂಗ ದೀಕ್ಷೆ ಪಡೆದಿದ್ದರು. ಈ ವೇಳೆ ರಷ್ಯಾದ ಮಹಿಳೆಯಾದ ಬಾಲಕನ ತಾಯಿ ಸಹ ವೀರಶೈವ ಧರ್ಮ ಸ್ವೀಕರಿಸಿದ್ದರು. ಬಳಿಕ ಪಾರ್ವತಿ ಎಂದು ಹೆಸರು ಬದಲಾಯಿಸಿಕೊಂಡಿದ್ದರು. ಅವರು ಚಾಚು ತಪ್ಪದೆ ವೀರಶೈವ ಧರ್ಮವನ್ನು ಪಾಲಿಸುತ್ತಿದ್ದರು. ಅಲ್ಲದೇ ಇಷ್ಟಲಿಂಗ ಪೂಜೆಯನ್ನು ಸಹ ನಿತ್ಯವೂ ನಡೆಸುತ್ತಿದ್ದರು. ಇದರಿಂದ ಮಗ ಕೂಡ ಪ್ರಭಾವಿತನಾಗಿದ್ದು, ಅವರಂತೆ ಇಷ್ಟಲಿಂಗ ಧರಿಸಲು ಬಯಸಿದ್ದ.

ಅವನ ಇಷ್ಟದಂತೆ ಪಾಲಕರು ಆತನಿಗೆ ಕಾಶಿ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳಿಂದ ಇಷ್ಟಲಿಂಗ ದೀಕ್ಷೆ ಕೊಡಿಸಿದ್ದಾರೆ. ಬಳಿಕ ಆತನಿಗೆ ಮರು ನಾಮಕರಣಮಾಡಿ ಶುಭ ಹಾರೈಸಿದ್ದಾರೆ.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section