ಬಂಟ್ವಾಳ: ವಿವಾಹ ನಿಶ್ಚಿತಾರ್ಥದ ಹಿನ್ನೆಲೆ ಕಳೆದ ಎಪ್ರಿಲ್‌ನಲ್ಲಿ ಯುವತಿಯೋರ್ವಳು ತನ್ನನ್ನು ಮದುವೆಯಾಗುವ ಯುವಕನ ಜತೆ ಬಂದು ಸ್ನೇಹಿತೆಯಿಂದ ಚಿನ್ನಾಭರಣ ಪಡೆದುಕೊಂಡು ಹಿಂದಿರುಗಿಸದೆ ವಂಚಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬಿ.ಸಿ. ರೋಡು ನಿವಾಸಿ ಸಂಧ್ಯಾ ವಂಚನೆಗೊಳಗಾದ ಮಹಿಳೆಯಾಗಿದ್ದು, ಆರೋಪಿಗಳಾದ ಅಶ್ವಿನಿ ಹಾಗೂ ಶ್ರೀಕಾಂತ್ ಚಿನ್ನಾಭರಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಬಳಿಕ ತಮ್ಮ ವಿವಾಹ ನಿಶ್ಚಿತಾರ್ಥಕ್ಕೆ ಚಿನ್ನಾಭರಣ ನೀಡುವಂತೆ ವಿನಂತಿಸಿದ್ದು, ಅದರಂತೆ ಸಂಧ್ಯಾ ಅವರು ತಮ್ಮ ಆಭರಣಗಳನ್ನು ಅಶ್ವಿನಿಗೆ ನೀಡುವಂತೆ ತಾಯಿಯ ಬಳಿ ಹೇಳಿದ್ದು, ಅವರು ನೀಡಿರುತ್ತಾರೆ.
ಸುಮಾರು 32.70 ಗ್ರಾಂ ತೂಕದ ಚಿನ್ನದ ನಕ್ಲೇಸ್, 15.10 ಗ್ರಾಂ ತೂಕದ ಚಿನ್ನದ ಕೈ ಬಳೆ, 2.20 ಗ್ರಾಂ ತೂಕದ ವಜ್ರದ ಒಂದು ಜತೆ ಕಿವಿಯೋಲೆ, 17.20 ಗ್ರಾಂನ ಚಿನ್ನದ ಕೈ ಬಳೆ, ತಲಾ 1 ಪವನ್ ತೂಕದ ಚಿನ್ನದ ಬಳೆ, ಚಿನ್ನದ ಪೆಂಡೆಂಟ್ ಹಾಗೂ ಚಿನ್ನದ ರಿಂಗ್, 19 ಗ್ರಾಂ ತೂಕದ ಚಿನ್ನದ ಸರ ಪಡೆದುಕೊಂಡು ಸಾಕಷ್ಟು ಬಾರಿ ಕೇಳಿದರೂ ಹಿಂದಿರುಗಿಸಿಲ್ಲ. ಆದರೆ ಕಳೆದ ಅ. 26ರಂದು ಆಭರಣಗಳಲ್ಲಿ 17.2 ಗ್ರಾಂನ ಕೈ ಬಳೆ ಹಾಗೂ ತಲಾ ಒಂದು ಪವನ್ ತೂಕದ ಚಿನ್ನದ ಪೆಂಡೆಂಟ, ಉಂಗುರವನ್ನು ಮಾತ್ರ ಹಿಂದಿರುಗಿಸಿರುತ್ತಾರೆ. ಪ್ರಸ್ತುತ ಸಂಧ್ಯಾ ನೀಡಿದ ದೂರಿನಂತೆ ಆರೋಪಿಗಳ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.