ಉಪ್ಪಿನಂಗಡಿ: ಅಪ್ರಾಪ್ತ ವಯಸ್ಕ ಬಾಲಕಿಯನ್ನು ಪ್ರೀತಿಸುವಂತೆ ಒತ್ತಾಯಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದನ್ವಯ ಯುವಕನ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಶಾಲೆಯೊಂದರ 8ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಸಂತ್ರಸ್ತೆಯನ್ನು ಆರೋಪಿ ಕುಟ್ಟಿಕಳ ನಿವಾಸಿ ಮುಸ್ತಾಫ ಅವರ ಮಗ ಮುಝಮಿಲ್ (19) ಸಂತ್ರಸ್ತೆಗೆ ಮೊಬೈಲ್ ಫೋನ್ ಸಂದೇಶ ಕಳುಹಿಸಿ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದುದ್ದಲ್ಲದೆ, ಅಕ್ಟೋಬರ್ 10 ರಂದು ನಿನಗೆ ಫ್ಯಾನ್ಸಿ ಐಟಂಗಳನ್ನು ಒದಗಿಸಿಕೊಡುವುದಾಗಿ ತಿಳಿಸಿ ಉಪ್ಪಿನಂಗಡಿಗೆ ಕರೆದುಕೊಂಡು ಹೋಗಿ ಅಲ್ಲಿನ ಕುಮಾರಧಾರಾ ನದಿಯ ಹಳೆ ಸೇತುವೆಯಲ್ಲಿ ವಿದ್ಯಾರ್ಥಿನಿಯನ್ನು ತಬ್ಬಿಕೊಂಡು ಲೈಂಗಿಕ ಹಿಂಸೆ ನೀಡಿರುವುದಾಗಿ ತಿಳಿದುಬಂದಿದೆ.
ನ.6ರಂದು ವಿದ್ಯಾರ್ಥಿನಿಗೆ ಪುನರಪಿ ಮೊಬೈಲ್ ಸಂದೇಶ ಕಳುಹಿಸಿ ಹಿಂಸಿಸುತ್ತಿರುವುದರಿಂದ ವಿದ್ಯಾರ್ಥಿನಿಯು ಮಾನಸಿಕವಾಗಿ ಕುಗ್ಗಿ ಹೋಗಿದ್ದು, ಆಕೆಯ ತಾಯಿ ಉಪಿನಂಗಡಿಗೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಉಪ್ಪಿನಂಗಡಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.