ಪುತ್ತೂರು: ಯುವ ಬರಹಗಾರ ಹಾಗೂ ಸಿ ಟಿವಿ ಕನ್ನಡ ವಾಹಿನಿಯ ವರದಿಗಾರ ಹರೀಶ್ ಪುತ್ತೂರು ರವರ ಚೊಚ್ಚಲ ಕೃತಿ “ಸಂಪಿಗೆಯಲ್ಲಿ ಅರಳಿದ ಚಂದ್ರಬಿಂಬ” ಎಂಬ ಜೀವನ ವೃತ್ತಾಂತ ಪ್ರಶಸ್ತಿ ಗೆ ಆಯ್ಕೆಯಾಗಿದೆ.

ಗುರುಕುಲ ಕಲಾ ಪ್ರತಿಷ್ಠಾನ (ರಿ) ಕೇಂದ್ರ ಸಮಿತಿ, ತುಮಕೂರು ಇದರ ವತಿಯಿಂದ ಸುವರ್ಣ ಕರ್ನಾಟಕ ಸಂಭ್ರಮ ಸವಿನೆನಪು ಅಖಿಲ ಭಾರತ 3ನೇ ಗುರುಕುಲ ಕಲಾ ಸಮ್ಮೇಳನ ಕಾರ್ಯಕ್ರಮ ದಿನಾಂಕ 18/11/2023 ರಂದು ಹಂಪಿಯಲ್ಲಿ ನಡೆಯಲಿದ್ದು , ಈ ಸಂದರ್ಭದಲ್ಲಿ”ಗುರುಕುಲ ಸಾಹಿತ್ಯ ಕೇಸರಿ” ಪುಸ್ತಕ ಪ್ರಕಟಿತ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಹರೀಶ್ ಅವರು ಸುಳ್ಯ ತಾಲೂಕಿನ ಕೊಡಿಯಾಲದ ಎಚ್ ಆರ್ ಬಾಬು ಮತ್ತು ಕಮಲ ದಂಪತಿಯ ಪುತ್ರ.