ಪುತ್ತೂರು : ಬಡಗನ್ನೂರು ಗ್ರಾಮದ ಕೊಯಿಲ ನಿವಾಸಿ ನವೀನ್ ಕುಮಾರ್ ರೈ ಎಂಬವರ ಹಳೆಯ ಮನೆಯ ಕೊಟ್ಟಿಗೆಯ ಅಟ್ಟದಲ್ಲಿ ಗೋಣಿಯಲ್ಲಿ ಇಟ್ಟಿದ್ದ 460 ಕೆ. ಜಿ ಸುಳಿದ ಅಡಿಕೆ ಕಳವಾಗಿತ್ತು. ಈ ಕುರಿತು ನವೀನ್ ಅವರು ಪೊಲೀಸರಿಗೆ ದೂರು ನೀಡಿದ್ದರು.
ಇದಕ್ಕೆ ಸಂಬಂಧಿಸಿದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.