ಬೆಂಗಳೂರು : ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ವಿಶ್ವ ಕಪ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಶ್ರೀಲಂಕಾ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿದೆ
ಇಂಗ್ಲೆಂಡ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಲಂಕನ್ನರ ಬಿಗಿ ಬೌಲಿಂಗ್ ದಾಳಿಗೆ ಸಿಲುಕಿ 33.2 ಓವರ್ ಗಳಲ್ಲಿ 156 ರನ್ ಗಳಿಗೆ ಆಲೌಟಾಯಿತು.
ಗುರಿ ಬೆನ್ನಟ್ಟಿದ ಲಂಕಾ 25.4 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿ 8 ವಿಕೆಟ್ ಅಂತರದ ಭರ್ಜರಿ ಜಯದ ನಗೆ ಬೀರಿತು.
ಆರಂಭಿಕ ಆಟಗಾರ ಪಾತುಮ್ ನಿಸ್ಸಂಕ(77*) ಮತ್ತು ಸದೀರ ಸಮರವಿಕ್ರಮ(65*) ಆಕರ್ಷಕ ಅರ್ಧ ಶತಕ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಕುಸಾಲ್ ಪೆರೆರಾ 4ರನ್ , ನಾಯಕ ಕುಸಾಲ್ ಮೆಂಡಿಸ್ 11ರನ್ ಗಳಿಸಿ ಔಟಾದರು. ನಿಸ್ಸಂಕ ಸತತ ನಾಲ್ಕನೇ ಅರ್ಧಶತಕ ಗಳಿಸಿದರು.