ಇತ್ತೀಚೆಗಷ್ಟೆ ಹಿಂದಿ ಬಿಗ್ಬಾಸ್ ಒಟಿಟಿ ಆವೃತ್ತಿಯ ಎರಡನೇ ಸೀಸನ್ ಮುಗಿದಿದೆ. ಅದರ ಬೆನ್ನಲ್ಲೆ ಈಗ ಹಿಂದಿ ಬಿಗ್ಬಾಸ್ ಟಿವಿ ಆವೃತ್ತಿಯ ಹೊಸ ಸೀಸನ್ ಘೋಷಣೆ ಮಾಡಲಾಗಿದೆ. ಒಟಿಟಿ ಆವೃತ್ತಿಯನ್ನು ಸಲ್ಮಾನ್ ಖಾನ್ ನಿರೂಪಣೆ ಮಾಡಿದ್ದರು. ಇದೀಗ ಟಿವಿ ಆವೃತ್ತಿಯನ್ನೂ ಅವರೇ ನಿರೂಪಣೆ ಮಾಡಲಿದ್ದಾರೆ.
ಹಿಂದಿ ಬಿಗ್ಬಾಸ್ 17ನೇ ಸೀಸನ್ ಪ್ರಾರಂಭಕ್ಕೆ ಮುಹೂರ್ತ ಇಡಲಾಗಿದೆ. ಬಿಗ್ಬಾಸ್ನ 17ನೇ ಸೀಸನ್ ಅಕ್ಟೋಬರ್ 15ರಿಂದ ಪ್ರಸಾರವಾಗಲಿದೆ. ಪ್ರತಿದಿನವೂ 10 ಗಂಟೆಗೆ ಬಿಗ್ಬಾಸ್ 17 ಎಪಿಸೋಡ್ಗಳು ಪ್ರಸಾರವಾಗಲಿವೆ. ಶನಿವಾರ ಮತ್ತು ಭಾನುವಾರ ಮಾತ್ರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ವಾರಾಂತ್ಯದ ಎಪಿಸೋಡ್ಗಳಲ್ಲಿ ಯಥಾವತ್ತು ನಟ ಸಲ್ಮಾನ್ ಖಾನ್ ಕಾಣಿಸಿಕೊಳ್ಳಲಿದ್ದಾರೆ.
ಹೊಸ ಸೀಸನ್ನ ಪ್ರೋಮೊ ಈಗಾಗಲೇ ಬಿಡುಗಡೆ ಆಗಿದ್ದು, ಈ ಬಾರಿ ಬಿಗ್ಬಾಸ್ನಲ್ಲಿ ಪಕ್ಷಪಾತ ಇರಲಿದೆ ಎಂಬುದನ್ನು ಪ್ರೋಮೋನಲ್ಲಿಯೇ ಹೇಳಲಾಗಿದೆ. ಸ್ಪರ್ಧಿಗಳಲ್ಲಿ ಕೆಲವರಿಗೆ ಸ್ವತಃ ಬಿಗ್ಬಾಸ್ ಮಾರ್ಗದರ್ಶನ ಮಾಡಲಿದ್ದಾರಂತೆ. ಆಟಗಳಲ್ಲಿ, ಟಾಸ್ಕ್ಗಳಲ್ಲಿ ಅವರಿಗೆ ಮಾರ್ಗದರ್ಶನ ಮಾಡಿ, ತರಬೇತಿ ನೀಡಿ ಆಟಕ್ಕೆ ತಯಾರು ಮಾಡಲಿದ್ದಾರಂತೆ.