ರಾಜ್ಯದ 28 ಕ್ಷೇತ್ರಗಳಿಗೆ ವೀಕ್ಷಕರನ್ನು ನೇಮಕ ಮಾಡಿದ ಕಾಂಗ್ರೆಸ್

By: Ommnews

Date:

Share post:

ಬೆಂಗಳೂರು, ಸೆ.24: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸುತ್ತಿದೆ. ಏಳು ತಿಂಗಳು ಮಾತ್ರ ಬಾಕಿ ಉಳಿದಿರುವ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕೃತವಾಗಿ ತಯಾರಿ ಆರಂಭಿಸಿದೆ. ರಾಜ್ಯದ 28 ಕ್ಷೇತ್ರಗಳಿಗೆ ವೀಕ್ಷಕರನ್ನು ನೇಮಕ ಮಾಡಿದೆ. 28 ಮಂದಿ ಸಚಿವರಿಗೆ ಕ್ಷೇತ್ರಗಳ ವೀಕ್ಷಕರಾಗಿ ನೇಮಕ ಮಾಡಲಾಗಿದ್ದು ಕ್ಷೇತ್ರಗಳಲ್ಲಿ ಸಭೆ ನಡೆಸಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ದಪಡಿಸಲು ಸೂಚನೆ ನೀಡಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಎಲ್ಲ ಸಚಿವರಿಗೂ ಸ್ವಂತ ಜಿಲ್ಲೆಯನ್ನು ಬಿಟ್ಟು ಬೇರೆ ಬೇರೆ ಜಿಲ್ಲೆಯ ಉಸ್ತುವಾರಿ ನೀಡಿದ್ದಾರೆ.

Advertisement
Advertisement
Advertisement

28 ಲೋಕಸಭಾ ಕ್ಷೇತ್ರಗಳಿಗೆ 28 ಸಚಿವರನ್ನು ವೀಕ್ಷಕರನ್ನಾಗಿ ನೇಮಕ ಮಾಡಿ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್‌ ಅವರು ಆದೇಶ ಹೊರಡಿಸಿದ್ದಾರೆ. ಪ್ರತಿ ಕ್ಷೇತ್ರದಲ್ಲೂ 2 ಅಥವಾ 3 ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುವ ಹೊಣೆಗಾರಿಕೆ ನೀಡಲಾಗಿದೆ. ಆಯಾ ಕ್ಷೇತ್ರಗಳಿಗೆ ನೇಮಕಗೊಂಡ ವೀಕ್ಷಕರು ತಮಗೆ ನೀಡಿರುವ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡು ಸಂಭಾವ್ಯ ಅಭ್ಯರ್ಥಿಗಳ ಮಾಹಿತಿಯನ್ನು ಸಂಗ್ರಹಿಸಿ, ಕೆಪಿಸಿಸಿಗೆ ವರದಿ ನೀಡಲು ಸೂಚಿಸಲಾಗಿದೆ.

ಯಾವ ಕ್ಷೇತ್ರಕ್ಕೆ ಯಾರು ವೀಕ್ಷಕರು?

ಬಾಗಲಕೋಟೆ -ಪ್ರಿಯಾಂಕ್ ಖರ್ಗೆ

ಬೆಂಗಳೂರು ಕೇಂದ್ರ -ಎನ್.ಎಸ್.ಬೋಸರಾಜು

ಬೆಂಗಳೂರು ಉತ್ತರ -ಡಾ.ಜಿ.ಪರಮೇಶ್ವರ

ಬೆಂಗಳೂರು ಗ್ರಾಮಾಂತರ -ಕೆ.ವೆಂಕಟೇಶ್

ಬೆಂಗಳೂರು ದಕ್ಷಿಣ -ಶರಣ ಪ್ರಕಾಶ ಪಾಟೀಲ್

ಬೆಳಗಾವಿ -ಶಿವರಾಜ್ ತಂಗಡಗಿ

ಗುಲ್ಬರ್ಗಾ -ನಾಗೇಂದ್ರ

ಬೀದರ್ -ಸಂತೋಷ್ ಲಾಡ್

ವಿಜಯಪುರ -ಸತೀಶ್ ಜಾರಕಿಹೊಳಿ

ಚಾಮರಾಜನಗರ -ದಿನೇಶ್ ಗುಂಡೂರಾವ್

ಚಿಕ್ಕಬಳ್ಳಾಪುರ -ಜಮೀರ್ ಅಹಮದ್ ಖಾನ್

ಚಿಕ್ಕೋಡಿ -ಡಿ.ಸುಧಾಕ

ರ್ಚಿತ್ರದುರ್ಗ -ಡಾ.ಹೆಚ್.ಸಿ.ಮಹದೇವಪ್ಪ

ದಕ್ಷಿಣ ಕನ್ನಡ -ಮಧು ಬಂಗಾರಪ್ಪ

ದಾವಣಗೆರೆ -ಈಶ್ವರ ಖಂಡ್ರೆ

ಧಾರವಾಡ -ಲಕ್ಷ್ಮೀ ಹೆಬ್ಬಾಳ್ಕರ್

ಬಳ್ಳಾರಿ -ಚೆಲುವರಾಯಸ್ವಾಮಿ

ಹಾಸನ -ಎನ್ ಚಲುವರಾಯಸ್ವಾಮಿ

ಹಾವೇರಿ -ಎಸ್.ಎಸ್.ಮಲ್ಲಿಕಾರ್ಜುನ

ಕೋಲಾರ -ರಾಮಲಿಂಗಾರೆಡ್ಡಿ

ಕೊಪ್ಪಳ -ಆರ್.ಬಿ.ತಿಮ್ಮಾಪುರ

ಮಂಡ್ಯ -ಡಾ.ಎ.ಸಿ.ಸುಧಾಕರ್

ಮೈಸೂರು -ಭೈರತಿ ಸುರೇಶ್

ರಾಯಚೂರು -ಕೆ.ಎಚ್.ಮುನಿಯಪ್ಪ

ಶಿವಮೊಗ್ಗ -ಕೆ.ಎನ್.ರಾಜಣ್ಣ

ತುಮಕೂರು -ಕೃಷ್ಣ ಭೈರೇಗೌಡ

ಉಡುಪಿ – ಚಿಕ್ಕಮಗಳೂರು -ಮಂಕಾಳ ವೈದ್ಯ

ಉತ್ತರ ಕನ್ನಡ -ಎಚ್.ಕೆ.ಪಾಟೀಲ್

ಲೋಕಸಭೆ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಜವಾಬ್ದಾರಿಯನ್ನು ಸಚಿವರಿಗೆ ನೀಡಲಾಗಿದೆ. ಹಾಘೂ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ದಪಡಿಸಲು ವೀಕ್ಷಕ ಸಚಿವರಿಗೆ ಸೂಚಿಸಲಾಗಿದೆ. ರಾಜ್ಯ ಕಾಂಗ್ರೆಸ್ ನಾಯಕರು ಈಗಾಗಲೇ ಒಂದು ಸುತ್ತಿನ ಮಾಹಿತಿ ಕಲೆ ಹಾಕಿದ್ದಾರೆ. ಕ್ಷೇತ್ರದಲ್ಲಿರುವ ಆ್ಯಕ್ಟಿವ್ ಅಭ್ಯರ್ಥಿಗಳು ಯಾರು? ಸಮುದಾಯವಾರು ಪ್ರಾಬಲ್ಯ ಯಾರಿಗಿದೆ? ಅಭ್ಯರ್ಥಿ ಬದಲಾವಣೆ ಯಿಂದ ಲಾಭ ನಷ್ಟಗಳೆನು? ಎಂಬ ಬಗ್ಗೆ ಮಾಹಿತಿ ಕಲೆ ಹಾಕಬೇಕು. ಪ್ರತಿ ಲೋಕಸಭಾ ಕ್ಷೇತ್ರಗಳಿಗೆ ಭೇಟಿ ಕೊಟ್ಟು ಸಚಿವರು ಸಭೆ ನಡೆಸಬೇಕು. ಕ್ಷೇತ್ರದ ವ್ಯಾಪ್ತಿಯ ಶಾಸಕರು, ಸಂಬಂಧಪಟ್ಟ ಪ್ರಮುಖ ನಾಯಕರ ಜೊತೆಗೆ ಸೂಕ್ತ ಸಮಾಲೋಚನೆ ನಡೆಸಬೇಕು. ಬಳಿಕ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ದಪಡಿಸಿ ಕೆಪಿಸಿಸಿಗೆ ರವಾನಿಸಬೇಕು ಎಂದು ಸಚಿವರಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಟಾಸ್ಕ್ ನೀಡಿದ್ದಾರೆ. ಹಿಂದೆ ವಿಧಾನಸಭೆ ಚುನಾವಣೆ ವೇಳೆ ಇದೇ ಮಾದರಿ ಅನುಸರಿಸಿ ಕಾಂಗ್ರೆಸ್ ಸಕ್ಸಸ್ ಕಂಡಿತ್ತು. ಕಾರ್ಯಾಧ್ಯಕ್ಷರಿಗೆ ಅಭ್ಯರ್ಥಿ ಆಯ್ಕೆಯ ಸಭೆಗಳನ್ನು ನಡೆಸಿ ವರದಿ ನೀಡುವಂತೆ ಹಿಂದೆ ಪ್ಲ್ಯಾನ್ ಮಾಡಿದ್ದ ರೀತಿ ಈ ಬಾರಿಯೂ ಪ್ಲ್ಯಾನ್ ಮಾಡಲಾಗಿದೆ. ಪ್ಲ್ಯಾನ್ ವರ್ಕೌಟ್ ಆಗಿದ್ದ ಕಾರಣಕ್ಕೆ ಅದೇ ಮಾದರಿಯಲ್ಲಿ ಲೋಕಸಭೆಗೂ ರಾಜ್ಯ ಕಾಂಗ್ರೆಸ್ ಘಟಕ ಮುನ್ನುಡಿ ಬರೆದಿದೆ.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section