ದರ್ಶನ್ ಹಾಗೂ ಮಾಲಾಶ್ರೀ ಮಗಳು ಆರಾಧಾನಾ ‘ಕಾಟೇರ’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಈ ಸಿನಿಮಾ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ‘ರಾಬರ್ಟ್’ ಬಳಿಕ ದರ್ಶನ್ ಹಾಗೂ ನಿರ್ದೇಶಕ ತರುಣ್ ಸುಧೀರ್ ಮತ್ತೊಮ್ಮೆ ಒಟ್ಟಾಗಿದ್ದಾರೆ. ಈಗಾಗಲೇ ಸಿನಿಮಾ ಶೂಟಿಂಗ್ ಪೂರ್ಣಗೊಂಡಿದ್ದು, ಮೂರು ಸಾಂಗ್ ಚಿತ್ರೀಕರಣ ಮಾತ್ರ ಬಾಕಿ ಇದೆ. ‘ಕಾಟೇರ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕೂಡ ಬಹುತೇಕ ಪೂರ್ಣಗೊಂಡಿವೆ. ಸಿನಿಮಾ ಯಾವಾಗ ರಿಲೀಸ್ ಎನ್ನುವ ಬಗ್ಗೆ ತರುಣ್ ಸುಧೀರ್ ಉತ್ತರಿಸಿದ್ದಾರೆ. ‘ಕಾಟೇರ ಚಿತ್ರವನ್ನು ಯಾವಾಗ ತೆರೆಗೆ ತರಬೇಕು ಎನ್ನುವ ಬಗ್ಗೆ ದರ್ಶನ್ ಹಾಗೂ ರಾಕ್ಲೈನ್ ವೆಂಕಟೇಶ್ ನಿರ್ಧಾರ ತೆಗೆದುಕೊಳ್ಳುತ್ತಾರೆ. ಈ ವರ್ಷವೇ ಸಿನಿಮಾ ರಿಲೀಸ್ ಮಾಡುವ ಗುರಿ ಇಟ್ಟುಕೊಂಡಿದ್ದೇವೆ’ ಎಂದಿದ್ದಾರೆ ಅವರು.