ಬೆಂಗಳೂರು : ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್ 25 ಮತ್ತು 26 ರಂದು ನಡೆಯಲಿರುವ ಬೆಂಗಳೂರು ಕಂಬಳ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ರವರು ವಿವಿಧ ಇಲಾಖಾ ಅಧಿಕಾರಿಗಳ ಸಭೆಯನ್ನು ನಡೆಸಿದರು.
ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯದ ರಾಜಧಾನಿಯಲ್ಲಿ ಕಂಬಳ ನಡೆಯುತ್ತಿದ್ದು ಇದೇ ಮೊದಲ ಬಾರಿಗೆ ಎಂಬಂತೆ ರಾಜಧಾನಿಯಲ್ಲಿ ಆಹೋರಾತ್ರಿ ಕಾರ್ಯಕ್ರಮ ನಡೆಯುತ್ತಿದೆ. ಲಕ್ಷಾಂತರ ಮಂದಿ ಭಾಗವಹಿಸುವ ಕಾರಣಕ್ಕೆ ಟ್ರಾಫಿಕ್ ಸಮಸ್ಯೆ, ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ, ಬಿಬಿಎಂಪಿ ಅರಣ್ಯ ಇಲಾಖೆ ಸೇರಿದಂತೆ ಕಂಬಳ ಕಾರ್ಯಕ್ರಮಕ್ಕೆ ಸಂಬಂದಿಸಿದಂತೆ ಅಧಿಕಾರಿಗಳ ಸಭೆಯನ್ನು ಕರೆದು ಅವರ ಜೊತೆ ಚರ್ಚೆ ನಡೆಸಿದರು. ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಇಲಾಖಾ ಅಧಿಕಾರಿಗಳಿಗೆ ಸ್ಪೀಕರ್ ರವರು ಮಾಹಿತಿ ಮತ್ತು ಸೂಚನೆಯನ್ನು ನೀಡಿದರು.
ಸಭೆಯಲ್ಲಿ ಕಂಬಳ ಸಮಿತಿಯ ಗೌರವ ಅಧ್ಯಕ್ಷರು ಬಂಜಾರಾ ಗ್ರೂಪ್ ನ ಪ್ರಕಾಶ್ ಶೆಟ್ಟಿ,ಅಶೋಕ್ ರೈ ಅಧ್ಯಕ್ಷರು, ಕಂಬಳ ಸಮಿತಿ, ಶಾಸಕರು ಪುತ್ತೂರು, ಉಪಾಧ್ಯಕ್ಷರಾದ ಗುಣರಂಜನ್ ಶೆಟ್ಟಿ, ಕಾರ್ಯಧ್ಯಕ್ಷರಾದ ಗುರುಕಿರಣ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು