ನೀರು ಪಾಲಗಿದ್ದ ಸೋಮಶೇಖರ ಅವರ ಶವ ಪತ್ತೆ

0
95

ನೆಲ್ಯಾಡಿ : ಸಿರಿಬಾಗಿಲು ಗ್ರಾಮದ ಬರ್ಚಿನಾಳ ನಿವಾಸಿ ಸೋಮಶೇಖರ್ ಎಂಬವರು ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಕಾಲು ಜಾರಿ ನೀರು ಪಾಲಾಗಿದ್ದರು. ಅವರ ಮೃತದೇಹ ಇವತ್ತು ಪತ್ತೆಯಾಗಿದೆ.

ಗುಂಡ್ಯ ಹೊಳೆಗೆ ನ.14ರಂದು ಸಂಜೆ ಸ್ನಾನಕ್ಕೆ ಹೋಗಿದ್ದ ವೇಳೆ ಸೋಮಶೇಖರ ಅವರು ಕಾಲು ಜಾರಿ ನೀರು ಪಾಲಾಗಿದ್ದರು. ಅವರಿಗಾಗಿ ತೀವ್ರ ಹುಡುಕಾಟ ನಡೆದಿತ್ತು.

ಅಗ್ನಿಶಾಮಕ ದಳ ಹಾಗೂ ವಿಪತ್ತು ತಂಡದವರು ಬುಧವಾರ ಮಧ್ಯಾಹ್ನ ಮೃತ ದೇಹ ಪತ್ತೆ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here