ಟೆಲ್ ಅವೀವ್: ಗಾಜಾದಲ್ಲಿ ಹೋರಾಡುತ್ತಿದ್ದ ಭಾರತೀಯ ಮೂಲದ ಇಸ್ರೇಲಿ ಯೋಧ ಮೃತಪಟ್ಟಿದ್ದಾರೆ ಎಂದು ಪಟ್ಟಣದ ಮೇಯರ್ ಬುಧವಾರ ತಿಳಿಸಿದ್ದಾರೆ. ದಕ್ಷಿಣ ಇಸ್ರೇಲಿ ಪಟ್ಟಣ ಡಿಮೋನಾದ ಹಾಲೆಲ್ ಸೊಲೊಮನ್ (20) ಮೃತಪಟ್ಟ ಯೋಧ.
ಗಾಜಾದಲ್ಲಿ ನಡೆದ ಯುದ್ಧದಲ್ಲಿ ಹಾಲೆಲ್ ಸೊಲೊಮನ್ ಅವರು ಮಡಿದ ಸುದ್ದಿಯನ್ನು ನಾವು ಬಹಳ ದುಃಖದಿಂದ ಘೋಷಿಸುತ್ತೇವೆ ಎಂದು ಡಿಮೋನಾದ ಮೇಯರ್ ಬೆನ್ನಿ ಬಿಟ್ಟನ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಯೋಧನ ಪೋಷಕರ ದುಃಖದಲ್ಲಿ ನಾವು ಕೂಡ ಭಾಗಿದಾರರು. ಹಾಲೆಲ್ ಅವರು ಅರ್ಥಪೂರ್ಣ ಸೇವೆ ಮಾಡಲು ಹಾತೊರೆಯುತ್ತಿದ್ದರು. ಉತ್ತಮ ಗುಣದ ವ್ಯಕ್ತಿತ್ವದವರಾಗಿದ್ದರು. ಇಡೀ ಡಿಮೋನಾ ನಗರವು ಅವರ ಅಗಲಿಕೆಯಿಂದ ದುಃಖಿತವಾಗಿದೆ ಎಂದು ವಿಷಾದಿಸಿದ್ದಾರೆ.
ಬಲಿದಾನಗೈದ ಯೋಧರನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ಮರಿಸಿದ್ದಾರೆ.