ಚೆನ್ನೈ : ತಮಿಳಿನ ಹೆಸರಾಂತ ನಟ ರಘು ಬಾಲಯ್ಯ ಇಂದು ನಿಧನರಾಗಿದ್ದಾರೆ.
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ತಮ್ಮ ಚೆನ್ನೈನ ವಲಸರವಕ್ಕಂನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಹೆಸರಾಂತ ಹಿರಿಯ ನಟ ಟಿ.ಎಸ್.ಬಾಲಯ್ಯ ಅವರ ಪುತ್ರರಾಗಿದ್ದ ರಘು ಅವರಿಗೆ 70 ವರ್ಷ ವಯಸ್ಸಾಗಿತ್ತು.
ರಘು ಅವರ ನಿಧನಕ್ಕೆ ಚಿತ್ರರಂಗದ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.