ಹ್ಯಾಂಗ್ ಝೋ : ಚೀನಾದಲ್ಲಿ ಅ.22ರಿಂದ 28ರ ವರೆಗೆ ನಡೆಯಲಿರುವ 4ನೇ ಆವೃತ್ತಿ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತದಿಂದ ದಾಖಲೆಯ 303 ಅಥ್ಲೀಟ್‌ಗಳು ಸ್ಪರ್ಧಿಸಲಿದ್ದಾರೆ. ಇದು ಈ ವರೆಗಿನ ಗರಿಷ್ಠ ಎನಿಸಿಕೊಂಡಿದ್ದು, ಇದೇ ಮೊದಲ ಬಾರಿಗೆ ಭಾರತದಿಂದ 200ಕ್ಕೂ ಹೆಚ್ಚು ಸ್ಪರ್ಧಿಗಳು ಪ್ಯಾರಾ ಏಷ್ಯಾಡ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.
ಭಾರತ ತಂಡದಲ್ಲಿ ಕರ್ನಾಟಕದ 26 ಸ್ಪರ್ಧಿಗಳು ಸಹ ಇದ್ದಾರೆ. ರಾಜ್ಯದ ಕ್ರೀಡಾಪಟುಗಳು ಈಜು, ಅಥ್ಲೆಟಿಕ್ಸ್, ಪವರ್‌ಲಿಫ್ಟಿಂಗ್, ಬೋಸಿಯಾ ಸೇರಿ ಇನ್ನೂ ಕೆಲ ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ದಾರೆ.
ಕ್ರೀಡಾ ಸಚಿವಾಲಯ ಈ ಬಾರಿ 191 ಪುರುಷ, 112 ಮಹಿಳಾ ಕ್ರೀಡಾಪಟುಗಳನ್ನು ಕಳುಹಿಸಲಿದೆ. ಭಾರತೀಯರು 17 ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ದು, 123 ಮಂದಿ ಅಥ್ಲೆಟಿಕ್ಸ್‌ನಲ್ಲೇ ಕಣಕ್ಕಿಳಿಯಲಿದ್ದಾರೆ. ಈ ಬಾರಿ ಅ.19ರಿಂದಲೇ ಸ್ಪರ್ಧೆಗಳು ಆರಂಭಗೊಳ್ಳಲಿದ್ದು, ಅ.22ಕ್ಕೆ ಅಧಿಕೃತವಾಗಿ ಕ್ರೀಡಾಕೂಟಕ್ಕೆ ಚಾಲನೆ ಸಿಗಲಿದೆ.