ಹ್ಯಾಂಗ್‌ಝೌ: ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023ರಲ್ಲಿ ಭಾರತದ ಸ್ಪರ್ಧಿಗಳ ಪದಕದ ಬೇಟೆ 6ನೇ ದಿನವಾದ ಶುಕ್ರವಾರವೂ ಮುಂದುವರಿದೆ. ಏರ್ ಪಿಸ್ತೂಲ್ ಶೂಟಿಂಗ್, ಸ್ಕ್ವಾಷ್, ಟೆನ್ನಿಸ್ ಬಳಿಕ ಅಥ್ಲೆಟಿಕ್ಸ್‌ನಲ್ಲೂ ಭಾರತೀಯರ ಪದಕ ಬೇಟೆ ಶುರುವಾಗಿದೆ.
ಶುಕ್ರವಾರ ಟೆನ್ನಿಸ್‌ನಲ್ಲಿ ಭಾರತ ಕಂಚು ಗೆದ್ದ ಬಳಿಕ ಮಹಿಳೆಯರ ಶಾಟ್‌ಪುಟ್ ವಿಭಾಗದಲ್ಲಿ ಕಿರಣ್ ಬಲಿಯಾನ್ ಕಂಚು ಗೆದ್ದು ಸಾಧನೆ ಮಾಡಿದ್ದಾರೆ. ಇದು ಈ ಬಾರಿ ಭಾರತಕ್ಕೆ ಅಥ್ಲೆಟಿಕ್ಸ್‌ನಲ್ಲಿ ಸಂದ ಮೊದಲ ಪದಕವಾಗಿದೆ. ಈ ಮೂಲಕ 8 ಚಿನ್ನ, 12 ಬೆಳ್ಳಿ, 13 ಕಂಚಿನ ಪದಕಗಳು ಸೇರಿ ಒಟ್ಟು 33 ಪದಕಗಳೊಂದಿಗೆ ಭಾರತ ರ‍್ಯಾಂಕಿಂಗ್ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿದಿದೆ.