ಮಂಗಳೂರು: ಬೆಂಗಳೂರಿನ ಕಂಬಳವನ್ನು ಯಶಸ್ವಿ ಗೊಳಿಸುವ ಕುರಿತು ಚರ್ಚಿಸಲು ಕಂಬಳದ ಕೇಂದ್ರ ಸಮಿತಿ ಹಾಗೂ ಬೆಂಗಳೂರು ಸಮಿತಿಗಳ ಸಭೆ ಸೆ. 30 ರಂದು ಅಪರಾಹ್ನ 3ಕ್ಕೆ ಮಂಗಳೂರಿನ ಹೊಟೇಲ್ ವುಡ್‌ಲ್ಯಾಂಡ್ಸ್‌ನಲ್ಲಿ ಜರಗಲಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಐಕಳಬಾವ ಡಾ| ದೇವಿಪ್ರಸಾದ ಶೆಟ್ಟಿ ಬೆಳಪು ಮತ್ತು ಬೆಂಗಳೂರು ಸಮಿತಿ ಅಧ್ಯಕ್ಷ, ಶಾಸಕ ಅಶೋಕ್ ಕುಮಾರ್ ರೈ ಅವರು ತಿಳಿಸಿದ್ದಾರೆ.