ವಿಮಾನ ಪತನ – ಇಬ್ಬರು ಸಿಬ್ಬಂದಿ ಸೇರಿ 14 ಮಂದಿ ಸಾವು

By: Ommnews

Date:

Share post:

ರಿಯೊ ಡಿ ಜನೈರೊ, ಸೆ 17 : ವಿಮಾನವೊಂದು ಪತನಗೊಂಡು 14 ಜನ ಮೃತಪಟ್ಟ ಘಟನೆ ಬ್ರೆಜಿಲ್‍ನ ಬಾರ್ಸಿಲೋಸ್‍ನಲ್ಲಿ ನಡೆದಿದೆ.

Advertisement
Advertisement
Advertisement

ಭಾರೀ ಮಳೆಯ ಹಿನ್ನೆಲೆಯಲ್ಲಿ ಲ್ಯಾಂಡ್ ಆಗಲು ಪ್ರಯತ್ನಿಸಿದ ಕಾರಣ ಈ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮೃತರಲ್ಲಿ 12 ಮಂದಿ ಪ್ರಯಾಣಿಕರು ಹಾಗೂ ಇಬ್ಬರು ಸಿಬ್ಬಂದಿ ಎಂದು ತಿಳಿದು ಬಂದಿದೆ.

ಭಾರೀ ಮಳೆ ಹಾಗೂ ಬಿರುಗಾಳಿಯ ನಡುವೆ ಪೈಲೆಟ್ ವಿಮಾನವನ್ನು ಇಳಿಸಲು ಪ್ರಯತ್ನಿಸಿದ್ದಾರೆ. ಇದರಿಂದಾಗಿ ಎದುರಿನ ರನ್ ವೇ ಪೈಲೆಟ್‍ಗೆ ಕಾಣಿಸದೆ ಇದ್ದ ಕಾರಣ ಮಧ್ಯದಲ್ಲಿ ವಿಮಾನ ಇಳಿದಿದೆ. ಈ ವೇಳೆ ವೇಗ ನಿಯಂತ್ರಣಕ್ಕೆ ಬರದೆ ವಿಮಾನ ಪತನಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತದ ಬಳಿಕ ಮೃತಪಟ್ಟವರನ್ನು ಅಮೆರಿಕ ಮೂಲದವರು ಎನ್ನಲಾಗಿತ್ತು. ಪರಿಶೀಲನೆಯ ಬಳಿಕ ಅವರೆಲ್ಲರು ಬ್ರೆಜಿಲ್‍ನ ಪ್ರಜೆಗಳು ಎಂದು ತಿಳಿದು ಬಂದಿದೆ. ಅವಘಡದ ಬಗ್ಗೆ ಬ್ರೆಜಿಲ್ ವಾಯುಪಡೆ ತನಿಖೆ ನಡೆಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅವಘಡದಲ್ಲಿ ಸಾವನ್ನಪ್ಪಿದವರ ಮೃತ ದೇಹಗಳನ್ನು ಅವರ ಕುಟುಂಬಸ್ಥರಿಗೆ ತಲುಪಿಸುವ ಪ್ರಯತ್ನ ನಡೆಯುತ್ತಿದೆ. ಆದರೆ ಹೆಚ್ಚಿನ ಮಳೆಯ ಕಾರಣದಿಂದ ವಿಮಾನ ಸಂಚಾರಕ್ಕೆ ಅನುಮತಿ ಸಿಕ್ಕಿಲ್ಲ. ಅನುಮತಿ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಲ್ಲಿನ ವಾಯು ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section