ಲಕ್ನೋ : ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಮುಗಿಲು ಮುಟ್ಟಿದೆ. ಎಲ್ಲೆಲ್ಲೂ ದೀಪಗಳ ಬೆಳಕಿನಲ್ಲಿ ರಾಮನಾಮದ ಘೋಷಣೆ ಮೊಳಗಿದೆ.
ಉತ್ತರ ಪ್ರದೇಶ ಸರ್ಕಾರದಿಂದ ಸರಯೂ ನದಿ ದಂಡೆಯಲ್ಲಿ ದೀಪೋತ್ಸವ ಆಯೋಜಿಸಲಾಗಿತ್ತು. ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ 50ಕ್ಕೂ ಹೆಚ್ಚು ದೇಶಗಳ ರಾಯಭಾರಿಗಳು ಸಂಭ್ರಮದಲ್ಲಿ ಭಾಗಿಯಾಗಿದ್ದರು. ಬರೋಬ್ಬರಿ 24 ಲಕ್ಷ ಹಣತೆಗಳು ಅಯೋಧ್ಯೆಯನ್ನು ಬೆಳಗಿದ್ದು, ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಯಿತು.
ಈ ಬಾರಿ 25,000 ಸ್ವಯಂಸೇವಕರು ಒಟ್ಟು 51 ಘಾಟ್‌ಗಳಲ್ಲಿ 24 ಲಕ್ಷ ಹಣತೆ ಅಯೋಧ್ಯೆಯಲ್ಲಿ ಬೆಳಗಿಸಿದ್ದಾರೆ.