ನವೆಂಬರ್ 2ರಂದು ಉತ್ತರಾ ಅಧುನಿಕ್ ವೈದ್ಯಕೀಯ ಆಸ್ಪತ್ರೆಯಲ್ಲಿ ಬಾಂಗ್ಲಾದೇಶದ ಜನಪ್ರಿಯ ಕಿರುತೆರೆ ನಟಿ ಹುಮೈರಾ ಹಿಮು ಸಾವನ್ನಪ್ಪಿದ್ದಾರೆ.
37ರ ವಯಸ್ಸಿನ ಈ ನಟಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ವೈದ್ಯರು ಹೇಳುವಂತೆ ಯುವಕನೊಬ್ಬನು ತಮ್ಮ ಆಸ್ಪತ್ರೆಗೆ ಹಿಮು ಅವರನ್ನು ಕರೆತಂದು. ಅವರು ಆಸ್ಪತ್ರೆಗೆ ಬರುವಾಗಲೇ ಸಾವನ್ನಪ್ಪಿದ್ದರು. ನಾವು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದೆವು. ಪೊಲೀಸರು ಆಸ್ಪತ್ರೆಗೆ ಬರುವ ಮುನ್ನವೇ ಆ ಹುಡುಗ ನಾಪತ್ತೆ ಆಗಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ. ಪೊಲೀಸರು ಬರುವ ಮುನ್ನವೇ ಆ ಹುಡುಗ ಆಸ್ಪತ್ರೆಯಿಂದ ನಾಪತ್ತೆ ಆಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಹುಮೈರಾ ಯುವಕನೊಬ್ಬನ ಜೊತೆ ಸಹಜೀವನ ನಡೆಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಇಬ್ಬರ ಮಧ್ಯ ಜಗಳವಾಗಿ ಹುಮೈರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಸಿಗುತ್ತಿದೆ. ಆಕೆಯ ಕತ್ತಿನ ಸುತ್ತ ಗಾಯಗಳು ಇವೆ ಎಂದು ವೈದ್ಯರು ತಿಳಿಸಿದ್ದು, ಮರಣೋತ್ತರ ಪರೀಕ್ಷೆಯಾಗಿದೆ. ವರದಿ ಬಂದ ನಂತರವೇ ನಿಖರ ಮಾಹಿತಿ ಸಿಗಬಹುದು ಎಂದು ಪೊಲೀಸರು ತಿಳಿಸಿದ್ದಾರೆ.