ಬಂಟ್ವಾಳ: ಕಲ್ಲಡ್ಕ ಸಮೀಪ ಎರಡು ಕಡೆ ಹೆದ್ದಾರಿ ಮಧ್ಯೆ ಲಾರಿಗಳೆರಡು ಕೆಟ್ಟು ನಿಂತ ಪರಿಣಾಮ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿ ಶುಕ್ರವಾರ ಮಧ್ಯಾಹ್ನ ಕೆಲ ಹೊತ್ತು ಟ್ರಾಫಿಕ್ ಜಾಮ್ ಉಂಟಾಯಿತು.
ಕಲ್ಲಡ್ಕ ಪೇಟೆಯ ಮೀನು ಮಾರುಕಟ್ಟೆ ಮುಂಭಾಗದ ಸರ್ವೀಸ್ ರಸ್ತೆಯಲ್ಲಿ ಲಾರಿಯೊಂದು ಕೆಟ್ಟು ನಿಂತು ವಾಹನಗಳ ಸಾಗಾಟಕ್ಕೆ ಅಡ್ಡಿಯಾಯಿತು.
ಜತೆಗೆ ನರಹರಿ ಪರ್ವತದ ಬಳಿಯೂ ಅದೇ ರೀತಿ ಹೆದ್ದಾರಿಯಲ್ಲೇ ಲಾರಿ ಬಾಕಿಯಾಗಿತ್ತು. ಎರಡು ಲಾರಿಗಳು ಕೂಡ ಮಂಗಳೂರು ಭಾಗದಿಂದ ಕೋಕ್ ತುಂಬಿಸಿಕೊಂಡು ಬೆಂಗಳೂರು ಕಡೆಗೆ ಸಾಗುತ್ತಿದ್ದು, ಓವರ್ಲೋಡ್ ಪರಿಣಾಮ ಹೆದ್ದಾರಿಯಲ್ಲಿ ಬಾಕಿಯಾಗಿದೆ ಎನ್ನಲಾಗಿದೆ.
ಟ್ರಾಫಿಕ್ ಜಾಮ್ ಇದೆ ಎಂದು ವಾಹನ ಚಾಲಕರು ನಿರ್ಮಾಣ ಹಂತದ ಫ್ಲೆ$çಓವರ್ ಪಿಲ್ಲರ್ಗಳ ಮಧ್ಯೆ ಅಡ್ಡಾದಿಡ್ಡಿ ಚಲಾಯಿಸಿದ ಪರಿಣಾಮ ಮತ್ತಷ್ಟು ತೊಂದರೆ ಉಂಟಾಗಿತ್ತು. ಬಳಿಕ ಬಂಟ್ವಾಳ ಸಂಚಾರ ಪೊಲೀಸ್ ಸಿಬಂದಿ ಸುತೇಶ್ ನೇತೃತ್ವದಲ್ಲಿ ಪೊಲೀಸರು ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು. ಕ್ರೇನ್ ಮೂಲಕ ಲಾರಿಗಳನ್ನು ಬದಿಗೆ ಸರಿಸಿದ ಬಳಿಕ ಸಂಚಾರ ಸಹಜ ಸ್ಥಿತಿಗೆ ಮರಳಿತು.