ಟೆಕ್‌ ಉದ್ಯಮಕ್ಕೆ ಸೆಡ್ಡು ಹೊಡೆದ 16 ವರ್ಷದ ಭಾರತೀಯ ಹುಡುಗಿ

By: Ommnews

Date:

Share post:

ಪ್ರಾಂಜಲಿ ಅವಸ್ಥಿ ಎಂಬ 16 ವರ್ಷದ ಭಾರತೀಯ ಹುಡುಗಿ ತನ್ನ AI ಸ್ಟಾರ್ಟ್ಅಪ್ (ಕೃತಕ ಬುದ್ಧಿಮತ್ತೆ) Delv.AI ಮೂಲಕ ಟೆಕ್ ಉದ್ಯಮಕ್ಕೆ ಸೆಡ್ಡು ಹೊಡೆದಿದ್ದಾಳೆ. ಮಿಯಾಮಿ ಟೆಕ್ ವೀಕ್ ಈವೆಂಟ್‌ನಲ್ಲಿ ಭಾಗವಹಿಸಿದ ಅವಸ್ಥಿ ಅವರು ಜನವರಿ 2022 ರಲ್ಲಿ ಕಂಪೆನಿಯನ್ನು ಪ್ರಾರಂಭಿಸಿದ ಬಗ್ಗೆ ಮಾತನಾಡಿದ್ದಾಳೆ. ಜೊತೆಗೆ ಸುಮಾರು 3.7 ಕೋಟಿ ರೂಪಾಯಿಗಳ ಹೂಡಿಕೆ ಪಡೆಯುವಲ್ಲಿ ಯಶಸ್ವಿಯಾದೆ ಎಂದು ಬಹಿರಂಗಪಡಿಸಿದ್ದಾಳೆ. Delv.AI ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ ತಿಳಿಸಿರುವಂತೆ 10 ಜನರ ಬಲಿಷ್ಠ ತಂಡ ಇದರಲ್ಲಿ ಕೆಲಸ ಮಾಡುತ್ತಿದೆ.

Advertisement
Advertisement
Advertisement

ಈ ಈವೆಂಟ್‌ನಲ್ಲಿ ಅವಸ್ಥಿ ತನ್ನ ಉದ್ಯಮಶೀಲತೆಯ ಪ್ರಯಾಣಕ್ಕೆ ತನ್ನ ತಂದೆಯೇ ಮೊದಲ ಪ್ರೇರಣೆ ಎಂದಿದ್ದಾರೆ. ಟೆಕ್‌ ಉದ್ಯಮದ ಬಗ್ಗೆ ನನಗೆ ಪ್ರೇರಣೆಯಾಗಿದ್ದು ತನ್ನ ಇಂಜಿನಿಯರ್‌ ತಂದೆ ಎಂದಿದ್ದಾರೆ.

ಶಾಲೆಗಳಲ್ಲಿ ಕಂಪ್ಯೂಟರ್ ಸೈನ್ಸ್ ಶಿಕ್ಷಣಕ್ಕಾಗಿ ತನ್ನ ಇಂಜಿನಿಯರ್ ತಂದೆ ಪ್ರೋತ್ಸಾಹಿಸಿದರು. ಇದರಿಂದ ನಾನು ಪ್ರಭಾವಿತಳಾದೆ. ಅವರ ಪ್ರೋತ್ಸಾಹದಿಂದ ಕೇವಲ ಏಳನೇ ವಯಸ್ಸಿನಲ್ಲಿ ಕೋಡಿಂಗ್ ಮಾಡುವುದನ್ನು ಕಲಿತೆ ಎಂದಿದ್ದಾರೆ. ಇದು ನನ್ನ ಪ್ರಮುಖ ಸಾಧನೆಗೆ ಅಡಿಪಾಯ ಹಾಕಿತು ಎಂದಿದ್ದಾರೆ.

ಪ್ರಾಂಜಲಿಯು ತನ್ನ ಉದ್ಯಮಶೀಲತೆಯ ಪ್ರಯಾಣಕ್ಕೆ ಲಾಭದಾಯಕವಾದ ವ್ಯಾಪಾರ ಕೌಶಲ್ಯಗಳನ್ನು ಪಡೆಯಲು ಭವಿಷ್ಯದಲ್ಲಿ ಉನ್ನತ ಶಿಕ್ಷಣ ಮಾಡುವ ಬಗ್ಗೆ ತೀರ್ಮಾನಿಸಿದ್ದಾಳೆ. ಸಣ್ಣ ಮತ್ತು ಕ್ರಿಯಾತ್ಮಕ ತಂಡವನ್ನು ಮುನ್ನಡೆಸುತ್ತಿರುವ ಪ್ರಾಂಜಲಿ, ಕೋಡಿಂಗ್‌ನಿಂದ ಕಾರ್ಯಾಚರಣೆಗಳು ಮತ್ತು ಗ್ರಾಹಕ ಸೇವೆಯವರೆಗೆ Delv.AI ನ ವಿವಿಧ ಅಂಶಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section