ರಾಜ್ಯದಲ್ಲಿ ಬರದ ಛಾಯೆ: ಸ್ವಂತ ಖರ್ಚಿನಲ್ಲಿ ಮೋಡ ಬಿತ್ತನೆ ಮಾಡಿದ ರಾಣೆಬೆನ್ನೂರು ಶಾಸಕ

By: Ommnews

Date:

Share post:

ಹುಬ್ಬಳ್ಳಿ : ರಾಜ್ಯದಲ್ಲಿ ಬರಗಾಲದ ಛಾಯೆ ಹಿನ್ನಲೆಯಲ್ಲಿ ಪಿಕೆಕೆ (ಪಕ್ಷಾತೀತ ಕಾಯಕ ಕನಸು) ಸಂಸ್ಥೆಯ ವತಿಯಿಂದ ಶಾಸಕ ಪ್ರಕಾಶ ಕೋಳಿವಾಡ ಸ್ವಂತ ಖರ್ಚಿನಲ್ಲಿ ಮೋಡ ಬಿತ್ತನೆ ಕಾರ್ಯ ಮಾಡಿಸಿದ್ದಾರೆ.

Advertisement
Advertisement
Advertisement

ಹುಬ್ಬಳ್ಳಿ ವಿಮಾನ ನಿಲ್ದಾಣದ ಆವರಣದಲ್ಲಿ ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್​​.ಕೆ.ಪಾಟೀಲ್ ಮೋಡ ಬಿತ್ತನೆ ಕಾರ್ಯಕ್ಕೆ ​ ಚಾಲನೆ ನೀಡಿದರು. ಈ ಬಗ್ಗೆ ರಾಣೆಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ಮಾತನಾಡಿದ್ದು, ಇಂದಿನಿಂದ 3 ದಿನಗಳ ಕಾಲ ಹಾವೇರಿ ಜಿಲ್ಲೆಯಲ್ಲಿ ಮೋಡ ಬಿತ್ತನೆ ನಡೆಯಲಿದೆ ಎಂದು ಹೇಳಿದ್ದಾರೆ.

ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರಗಾಲ ಛಾಯೆಯ ಬಗ್ಗೆ ಹವಾಮಾನ ವರದಿ ಮುನ್ಸೂಚನೆ ನೀಡಿತ್ತು. ಕೇಂದ್ರದ ಭೂವಿಜ್ಞಾನ ಸಚಿವಾಲಯ ಸಾಕಷ್ಟು ರಿಸರ್ಚ್ ಮಾಡಿತ್ತು. ಮಳೆ ಬರುವುದು ಖಚಿತ ಅನ್ನುವ ಮಾಹಿತಿಯಿಂದ ಮೋಡ ಬಿತ್ತನೆ ಮಾಡಲಾಗಿದೆ. ರಾಣೆಬೆನ್ನೂರು ಕ್ಷೇತ್ರದ ರೈತರು ಅವಶ್ಯಕತೆ ಇದೆ ಅಂತಾ ಹೇಳಿದ್ದಾರೆ. ಹೀಗಾಗಿ ನಾವು ಮೋಡ ಬಿತ್ತನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಮೋಡ ಬಿತ್ತನೆಗೆ ಸಿಎಂ ಸಿದ್ದರಾಮಯ್ಯನವರು ಅನುಮತಿ ಕೊಟ್ಟಿದ್ದಾರೆ. ಮೋಡ ಬಿತ್ತನೆಯಿಂದ ಶೇ.28ರಷ್ಟು ಮಳೆ ಆಗುತ್ತೆ ಎನ್ನಲಾಗುತ್ತಿದೆ. ಹಾವೇರಿ ಜಿಲ್ಲೆಯಲ್ಲಿ ಮಾತ್ರ ಮೋಡ ಬಿತ್ತನೆ ಕಾರ್ಯ ಮಾಡುತ್ತಿದ್ದೇವೆ. ನಮ್ಮದೇ ಸ್ವಂತ ವಿಮಾನ ಇರುವುದರಿಂದ ಖರ್ಚು ಕಡಿಮೆ ಆಗುತ್ತದೆ. 15ರಿಂದ 20 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಮೋಡ ಬಿತ್ತನೆ ಮುಗಿಯಲಿದೆ ಎಂದು ಹೇಳಿದರು.

ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಹಾವೇರಿ ಜಿಲ್ಲೆಯತ್ತ ಮೋಡ ಬಿತ್ತನೆ ವಿಮಾನ ಹೊರಟಿದೆ. ಪಿ.ಕೆ.ಕೆ.ಇನಿಷಿಯೇಟೆವ್ಸ್ ಅಡಿಯಲ್ಲಿ ಮೋಡ‌ ಬಿತ್ತನೆ ಮಾಡಲಾಗಿದ್ದು, ಇಂದಿನಿಂದ ಮೂರು ದಿನಗಳ ಹಾವೇರಿ ಜಿಲ್ಲೆಯ ಎಲ್ಲಾ ಕಡೆ ಆಗಸದಲ್ಲಿ ವಿಶೇಷ ವಿಮಾನದ ಮೂಲಕ ಮೋಡ ಬಿತ್ತನೆ ನಡೆಯಲಿದೆ ಎಂದರು.

ಮೋಡ ಬಿತ್ತನೆ ವಿಫಲವಾಗಿಲ್ಲ ಎಂದ ಸಚಿವ ಹೆಚ್​.ಕೆ.ಪಾಟೀಲ್​

ಮೋಡ ಬಿತ್ತನೆ ವಿಫಲವಾಗಿಲ್ಲ. ರಾಜ್ಯದ ಜನರಿಗೆ ಒಳಿತು ಮಾಡಲು ಮೋಡ ಬಿತ್ತನೆ ಮಾಡಿದ್ದೇವೆ. ಹಾವೇರಿ, ರಾಣೆಬೆನ್ನೂರು ತಾಲೂಕಿನ ಗುಣಮಟ್ಟ ನೋಡಿ ಬಿತ್ತನೆ ಮಾಡುತ್ತೇವೆ. ಶಾಸಕ ಪ್ರಕಾಶ್​ ಕೋಳಿವಾಡಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಗದಗ ಜಿಲ್ಲೆಯಲ್ಲೂ ಮೋಡ ಬಿತ್ತನೆ ಮಾಡಿ ಅಂತಾ ಹೇಳಿದ್ದೇನೆ ಎಂದು ಸಚಿವ ಎಚ್​.ಕೆ.ಪಾಟೀಲ್​ ಹೇಳಿದರು.

2003ರಲ್ಲಿ ಎಸ್ ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ಮೋಡ ಬಿತ್ತನೆ ಮಾಡಿದ್ದೆವು. 85 ದಿನದಲ್ಲಿ 60ಕ್ಕೂ ಹೆಚ್ಚು ದಿನ ಮೋಡ ಬಿತ್ತನೆ ಯಶಸ್ಸು ಕಂಡಿತ್ತು. ಮೋಡಬಿತ್ತನೆ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡುತ್ತೇನೆ ಎಂದು ಹೇಳಿದರು.

ಮುಂಗಾರು ಮಳೆ ವಿಳಂಬ ಹಿನ್ನೆಲೆಯಲ್ಲಿ ಮೋಡ ಬಿತ್ತನೆಗೆ ರಾಜ್ಯ ಸರ್ಕಾರ ಮುಂದಾಗುತ್ತಿರೋ ಬಗ್ಗೆ ಧಾರವಾಡದಲ್ಲಿ ಕೃಷಿ ಸಚಿವ ಚೆಲುವರಾಯಸ್ವಾಮಿ ಇತ್ತೀಚೆಗೆ ಸುಳಿವು ಕೊಟ್ಟಿದ್ದರು. ಮುಂಗಾರು ಮಳೆ ತಡವಾಗಿದೆ.‌ ಕಳೆದ ಸಲಕ್ಕಿಂತ ಈಗ ಶೇ. 30ರಷ್ಟು ಮಳೆ ಕಡಿಮೆ ಆಗಿದೆ. ಮಳೆಯ ನಿರೀಕ್ಷೆ ಮಾಡುತ್ತಿದ್ದೇವೆ. ಒಂದು ವಾರದಿಂದ ತಡವಾಗುತ್ತಲೇ ಇದೆ. ಮುಂದಿನ ಎರಡು ದಿನ ಕಾದು ನೋಡುತ್ತೇವೆ ಎಂದರು.

ಬೀಜ ರಸಗೊಬ್ಬರ ಎಲ್ಲ ಸಂಗ್ರಹ ಮಾಡಿಟ್ಟುಕೊಂಡಿದ್ದೇವೆ. ಆದರೆ ಮುಂಗಾರು ವಿಳಂಬದಿಂದ ಬೇರೆ ಏನೂ ಮಾಡಲು ಆಗುತ್ತಿಲ್ಲ.‌ ಮೂರು ದಿನದಲ್ಲಿ ಮಳೆಯಾಗದಿದ್ದರೆ ಮೋಡ ಬಿತ್ತನೆ ಚಿಂತನೆ ಮಾಡಲಾಗುವುದು. ಮೂರು ದಿನ ಕಾದು ನೋಡುತ್ತೇವೆ. ಕ್ಯಾಬಿನೆಟ್‌‌ನಲ್ಲಿ ನಿರ್ಣಯ ಮಾಡುತ್ತೇವೆ ಎಂದು ಹೇಳಿದರು.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section