ಬೆಂಗಳೂರು; ಚಂದ್ರಯಾನ-3 ಯಶಸ್ಸಿನಿಂದ ವಿಶ್ವದಲ್ಲೇ ಭಾರತ ರಾರಾಜಿಸುವಂತಾಗಿದೆ. ಈ ಕೀರ್ತಿಗೆ ಕಾರಣರಾದ ಹೆಮ್ಮೆಯ ಇಸ್ರೋ ವಿಜ್ಞಾನಿಗಳನ್ನು ಖುದ್ದು ಅಭಿನಂದಿಸಿ, ಮುಖಾಮುಖಿಯಾಗಿ ಮಾತನಾಡಲೆಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಬೆಂಗಳೂರಿಗೆ ಆಗಮಿಸಿದ್ದಾರೆ. ಈ ಭೇಟಿಯನ್ನು ಬಿಜೆಪಿಯದಲ್ಲ ದೇಶಭಕ್ತಿ, ಶ್ರೇಷ್ಠತೆ ಹಾಗೂ ಸಮ್ಮಾನ ಎತ್ತಿಹಿಡಿಯುವ ಕಾರ್ಯಕ್ರಮವಾಗಲು ಪ್ರಧಾನಮಂತ್ರಿ ಕಚೇರಿ ಬಯಸಿದೆ. ಪ್ರಧಾನಿ ಕಚೇರಿ ಸೂಚನೆಯ ಅನುಸಾರ ಬಿಜೆಪಿ ಕೇಂದ್ರ ಕಚೇರಿಯು ಪಕ್ಷದ ರಾಜ್ಯ ಸಮಿತಿಗೆ ಸ್ಪಷ್ಟ ಸಂದೇಶ ಕಳುಹಿಸಿದೆ. ಈ ಹಿನ್ನೆಲೆಯಲ್ಲಿ ಮೋದಿ ಬಂದಿಳಿಯುವ ಎಚ್ ಎಎಲ್ ವಿಮಾನ ನಿಲ್ದಾಣ , ಸಾಗುವ ಮಾರ್ಗದ ಬದಿ ಜನರು ಜಮಾವಣೆಯಾಗಿ ತ್ರಿವರ್ಣ ಧ್ವಜ ಹಿಡಿದು ಸ್ವಾಗತಿಸಲಿದೆ. ಪಕ್ಷದ ರಾಜ್ಯ ನಾಯಕರು ಕೂಡ ಕಮಲ ಬಾವುಟ ಬದಲಿಗೆ ರಾಷ್ಟ್ರ ಬಾವುಟ ವಿತರಿಸಲು ತಯಾರಿ ಮಾಡಿಕೊಂಡಿದ್ದಾರೆ
ಮೋದಿ ಕಾರ್ಯಕ್ರಮ
ದಕ್ಷಿಣ ಆಫ್ರಿಕಾ, ಗ್ರೀಸ್ ಪ್ರವಾಸದಲ್ಲಿರುವ ಮೋದಿಯವರು ಜೊಹಾನ್ಸ್‌ಬರ್ಗ್‌ನಿಂದ ನೇರವಾಗಿ ಬೆಳಗ್ಗೆ 5.55ಕ್ಕೆ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ.
7 ಗಂಟೆಗೆ ಪೀಣ್ಯದಲ್ಲಿರುವ ಇಸ್ರೋದ ಕಮಾಂಡ್ ಸೆಂಟರ್ ಇಸ್ಟ್ರಾಕ್‌ಗೆ ಮೋದಿ ಭೇಟಿ ನೀಡಲಿದ್ದಾರೆ. ಇಸ್ರೊ ಮುಖ್ಯಸ್ಥರು, ವಿಜ್ಞಾನಿಗಳಿಗೆ ಅಭಿನಂದನೆ ಹೇಳಲಿದ್ದಾರೆ.
ಬಳಿಕ ಪೀಣ್ಯದ ಇಸ್ರೋ ಪರಿಸರದಲ್ಲಿ ಸುಮಾರು ಒಂದು ಕಿ.ಮೀ.ವರೆಗೆ ಮೋದಿ ವಾಹನದಲ್ಲಿ ತೆರಳಿ, ಅಲ್ಲಿಂದ ಎಚ್‌ಎಎಲ್ ವಿಮಾನ ನಿಲ್ದಾಣ ತಲುಪಲಿದ್ದಾರೆ.
ಬೆಳಗ್ಗೆ 8.35ಕ್ಕೆ ಎಚ್‌ಎಎಲ್‌ನಿಂದ ಹೊರಟು 11.35ಕ್ಕೆ ನವದೆಹಲಿಗೆ ತೆರಳಲಿದ್ದಾರೆ.
ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…
ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…
ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…
ದಿನಾಂಕ 31 ಡಿಸೆಂಬರ್ 2023 ರಂದು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಬೆಳ್ತಂಗಡಿ ತಾಲೂಕಿನ ಉಜಿರೆ ಶ್ರೀ ವ್ಯಾಘ್ರ ಚಾಮುಂಡೇಶ್ವರಿ…
ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…
ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…