ಬೆಂಗಳೂರಿಗೆ ಮೋದಿ; ಬಿಜೆಪಿಯದಲ್ಲ ದೇಶ ಭಕ್ತಿ ಬಿಂಬಿಸುವ ಕಾರ್ಯಕ್ರಮ

By: Ommnews

Date:

Share post:

ಬೆಂಗಳೂರು; ಚಂದ್ರಯಾನ-3 ಯಶಸ್ಸಿನಿಂದ ವಿಶ್ವದಲ್ಲೇ ಭಾರತ ರಾರಾಜಿಸುವಂತಾಗಿದೆ. ಈ ಕೀರ್ತಿಗೆ ಕಾರಣರಾದ ಹೆಮ್ಮೆಯ ಇಸ್ರೋ ವಿಜ್ಞಾನಿಗಳನ್ನು ಖುದ್ದು ಅಭಿನಂದಿಸಿ, ಮುಖಾಮುಖಿಯಾಗಿ ಮಾತನಾಡಲೆಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಬೆಂಗಳೂರಿಗೆ ಆಗಮಿಸಿದ್ದಾರೆ. ಈ ಭೇಟಿಯನ್ನು ಬಿಜೆಪಿಯದಲ್ಲ ದೇಶಭಕ್ತಿ, ಶ್ರೇಷ್ಠತೆ ಹಾಗೂ ಸಮ್ಮಾನ ಎತ್ತಿಹಿಡಿಯುವ ಕಾರ್ಯಕ್ರಮವಾಗಲು ಪ್ರಧಾನಮಂತ್ರಿ ಕಚೇರಿ ಬಯಸಿದೆ. ಪ್ರಧಾನಿ ಕಚೇರಿ ಸೂಚನೆಯ ಅನುಸಾರ ಬಿಜೆಪಿ ಕೇಂದ್ರ ಕಚೇರಿಯು ಪಕ್ಷದ ರಾಜ್ಯ ಸಮಿತಿಗೆ ಸ್ಪಷ್ಟ ಸಂದೇಶ ಕಳುಹಿಸಿದೆ. ಈ ಹಿನ್ನೆಲೆಯಲ್ಲಿ ಮೋದಿ ಬಂದಿಳಿಯುವ ಎಚ್ ಎಎಲ್ ವಿಮಾನ ನಿಲ್ದಾಣ ,‌ ಸಾಗುವ ಮಾರ್ಗದ ಬದಿ ಜನರು ಜಮಾವಣೆಯಾಗಿ ತ್ರಿವರ್ಣ ಧ್ವಜ ಹಿಡಿದು ಸ್ವಾಗತಿಸಲಿದೆ. ಪಕ್ಷದ ರಾಜ್ಯ ನಾಯಕರು ಕೂಡ ಕಮಲ ಬಾವುಟ ಬದಲಿಗೆ ರಾಷ್ಟ್ರ ಬಾವುಟ ವಿತರಿಸಲು ತಯಾರಿ ಮಾಡಿಕೊಂಡಿದ್ದಾರೆ

Advertisement
Advertisement
Advertisement

ಮೋದಿ ಕಾರ್ಯಕ್ರಮ
ದಕ್ಷಿಣ ಆಫ್ರಿಕಾ, ಗ್ರೀಸ್ ಪ್ರವಾಸದಲ್ಲಿರುವ ಮೋದಿಯವರು ಜೊಹಾನ್ಸ್‌ಬರ್ಗ್‌ನಿಂದ ನೇರವಾಗಿ ಬೆಳಗ್ಗೆ 5.55ಕ್ಕೆ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ.
7 ಗಂಟೆಗೆ ಪೀಣ್ಯದಲ್ಲಿರುವ ಇಸ್ರೋದ ಕಮಾಂಡ್‌ ಸೆಂಟರ್ ಇಸ್ಟ್ರಾಕ್‌ಗೆ ಮೋದಿ ಭೇಟಿ‌ ನೀಡಲಿದ್ದಾರೆ. ಇಸ್ರೊ ಮುಖ್ಯಸ್ಥರು, ವಿಜ್ಞಾನಿಗಳಿಗೆ ಅಭಿನಂದನೆ ಹೇಳಲಿದ್ದಾರೆ.
ಬಳಿಕ ಪೀಣ್ಯದ ಇಸ್ರೋ ಪರಿಸರದಲ್ಲಿ ಸುಮಾರು ಒಂದು ಕಿ.ಮೀ.ವರೆಗೆ ಮೋದಿ ವಾಹನದಲ್ಲಿ ತೆರಳಿ, ಅಲ್ಲಿಂದ ಎಚ್‌ಎಎಲ್‌ ವಿಮಾನ ನಿಲ್ದಾಣ ತಲುಪಲಿದ್ದಾರೆ.
ಬೆಳಗ್ಗೆ 8.35ಕ್ಕೆ ಎಚ್‌ಎಎಲ್‌ನಿಂದ ಹೊರಟು 11.35ಕ್ಕೆ ನವದೆಹಲಿಗೆ ತೆರಳಲಿದ್ದಾರೆ.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section