ಇತರೆ

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿ

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ ಮನವಿಯನ್ನು ಮಾನ್ಯ ಜಿಲ್ಲಾ ಧಿಕಾರಿ ಮುಲ್ಲೈ ಮುಗಿಲನ್ ಇವರ ಮಾಧ್ಯಮ ದಿಂದ ಮುಖ್ಯ ಮಂತ್ರಿಗೆ ತಲುಪಿಸಬೇಕಾಗಿ ಪ್ರಶಾಂತ್ ಪೂಜಾರಿ ಯವರ ತಾಯಿ ಯಶೋದಾ ಪೂಜಾರ್ತಿ ಹಾಗೂ ದೀಪಕ್ ರಾವ್ ಅವರ ತಾಯಿ ಪ್ರೇಮ ರಾವ್ ವಿನಂತಿ ಮಾಡಿದರು.

Advertisement
Advertisement
Advertisement

ಜಿಲ್ಲಾಧಿಕಾರಿಗಳಿಗೆ ನೀಡಿದ ಮನವಿ

2015 ರಲ್ಲಿ ಪ್ರಶಾಂತ್ ಪೂಜಾರಿಯ ಕೊಲೆಯು ನಡೆದಿದ್ದು ಹಾಗೆಯೆ 2019 ರಲ್ಲಿ ದೀಪಕ್ ರಾವ್ ಕೊಲೆಯು ನಡೆದಿದ್ದು. ಈ ಪ್ರಕರಣದ ತನಿಖೆಯು ಶೀಘ್ರವಾಗಿ ನಡೆದು ಅಪರಾಧಿಗಳಿಗೆ ಶಿಕ್ಷೆಯಾಗುವುದು ಎಂಬ ನಿರೀಕ್ಷೆಯಲ್ಲಿದ್ದೆವು. ಆದರೆ ನ್ಯಾಯಾಲಯದಲ್ಲಿ ತನಿಖೆಯು ನಮ್ಮ ನಿರೀಕ್ಷೆಯಂತೆ ಶೀಘ್ರಗತಿಯಲ್ಲಿ ನಡೆಯುತ್ತಿಲ್ಲ.

ಇತ್ತೀಚೆಗೆ ನಾನು ಪತ್ರಿಕಾ ಮಾಧ್ಯಮದ ಮೂಲಕ ಗಮನಿಸಿದ ವಿಷಯವೇನಂದರೆ, ಗೌರಿ ಲಂಕೇಶ್ ಮತ್ತು ಕಲಬುರ್ಗಿ ಹತ್ಯೆ ಪ್ರಕರಣವನ್ನು ತಾವು ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಿ ಶೀಘ್ರಗತಿಯಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಮಾಡುವುದಾಗಿ ಭರವಸೆ ನೀಡಿರುವುದು ಶ್ಲಾಘನೀಯವಾಗಿದೆ. ಹಾಗೆಯೇ ತಾವುಗಳು ದೀಪಕ್ ರಾವ್ ಹಾಗೂ ಪ್ರಶಾಂತ್ ಪೂಜಾರಿಯ ಕೊಲೆ ಪ್ರಕರಣವನ್ನು ವಿಶೇಷ ನ್ಯಾಯಾಲಯದ ಮೂಲಕ ತನಿಖೆ ನಡೆಸಿ ಅಪರಾಧಿಗಳನ್ನು ಶೀಘ್ರವಾಗಿ ಶಿಕ್ಷೆಗೆ ಒಳಪಡಿಸಿ ನನ್ನ ಮಗನಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇನೆ.

ಇತಿ ತಮ್ಮ ವಿಶ್ವಾಸಿ, ಯಶೋದಾ ಪೂಜಾರ್ತಿ ಪ್ರೇಮಾ ರಾವ್

Photo ಕ್ಯಾಪ್ಶನ್

  • ಜಿಲ್ಲಾಧಿಕಾರಿಗಳಿಗೆ ಮನವಿ ನೀಡುವ ದೀಪಕ್ ರಾವ್ ಅವರ ತಾಯಿ ಪ್ರೇಮ ರಾವ್ ಮತ್ತೆ ಚಿಕಪ್ಪ ಸರತೋಜಿ
  • ಜಿಲ್ಲಾಧಿಕಾರಿಗಳಿಗೆ ಮನವಿ ನೀಡುವ ಪ್ರಶಾಂತ್ ಪೂಜಾರಿ ಅವರ ತಾಯಿ ಯಶೋದಾ ಪೂಜಾರ್ತಿ

ommnews

Recent Posts

ಹಿಂದೂ ಧರ್ಮರಕ್ಷಣೆಗಾಗಿ ಹಿಂದೂ ರಾಷ್ಟ್ರ ಸ್ಥಾಪನೆಯ ಅವಶ್ಯಕತೆ

ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…

2 years ago

ಹಿಂದೂಗಳ ಜಾಗೃತಿಗಾಗಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿತ ಹಿಂದೂ ರಾಷ್ಟ್ರ-ಜಾಗೃತಿ ಸಭೆ !

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…

2 years ago

ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಅಪಮಾನ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ !

ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…

2 years ago

ಅಯೋಧ್ಯೆಯಲ್ಲಿ ಮದ್ಯ ನಿಷೇಧಕ್ಕೆ ಆಗ್ರಹ; ಮಾನ್ಯ ಮಾಡಿದ ಯೋಗಿ ಸರಕಾರಕ್ಕೆ ಅಭಿನಂದನೆ !

ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…

2 years ago

ಛತ್ತಿಸ್ಗಢ ರಾಜ್ಯದಲ್ಲೂ ಹಲಾಲ್ ಉತ್ಪಾದನೆ ನಿಷೇಧದ ಬೇಡಿಕೆ !

ಛತ್ತೀಸ್ಗಡ ರಾಜ್ಯದಲ್ಲೂ ಹಲಾಲ್ ಉತ್ಪಾದನೆಗಳ ಮೇಲೆ ನಿಷೇಧ ಹೇರಲು ಪ್ರಯತ್ನಿಸುವರು !- ವಿಜಯ ಶರ್ಮಾ, ಉಪಮುಖ್ಯಮಂತ್ರಿ, ಛತ್ತೀಸ್ಗಢ ರಾಜ್ಯ ರಾಯಪುರ…

2 years ago