Categories: ಇತರೆ

ವಿಶ್ವ ಅಥ್ಲೆಟಿಕ್ಸ್​ನಲ್ಲಿ ಇಂದು ನೀರಜ್​ ಚೋಪ್ರಾ ಕಣಕ್ಕೆ; ಸ್ಪರ್ಧೆ ಆರಂಭದ ಸಮಯ ಹೀಗಿದೆ…..

Advertisement
Advertisement
Advertisement

ಬುಡಾಪೆಸ್ಟ್​: ಒಲಿಂಪಿಕ್ಸ್​ ಮತ್ತು ವಿಶ್ವ ಚಾಂಪಿಯನ್​ಷಿಪ್​ ಎರಡರಲ್ಲೂ ಸ್ವರ್ಣ ಪದಕ ಗೆದ್ದ 2ನೇ ಭಾರತೀಯ ಎನಿಸುವ ಹಂಬಲದಲ್ಲಿರುವ ಜಾವೆಲಿನ್​ ಥ್ರೋ ತಾರೆ ನೀರಜ್​ ಚೋಪ್ರಾ ಶುಕ್ರವಾರ ನಡೆಯಲಿರುವ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಕಣಕ್ಕಿಳಿಯಲಿದ್ದಾರೆ. ಕನ್ನಡಿಗ ಮನು ಡಿ.ಪಿ. ಕೂಡ ನೀರಜ್​ ಜತೆಗೆ ಸ್ಪರ್ಧೆಗಿಳಿಯಲಿದ್ದಾರೆ. ಶೂಟರ್​ ಅಭಿನವ್​ ಬಿಂದ್ರಾ ಒಲಿಂಪಿಕ್ಸ್-ವಿಶ್ವ ಚಾಂಪಿಯನ್​ಷಿಪ್​ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯರಾಗಿದ್ದಾರೆ.

ಕಳೆದ ಆವೃತ್ತಿಯಲ್ಲಿ ಗೆದ್ದಿದ್ದ ರಜತವನ್ನು ಸ್ವರ್ಣ ಪದಕವಾಗಿ ಬದಲಾಯಿಸುವತ್ತ 25 ವರ್ಷದ ನೀರಜ್​ ದೃಷ್ಟಿ ನೆಟ್ಟಿದ್ದಾರೆ. ಜತೆಗೆ ಮೊದಲ ಬಾರಿಗೆ 90 ಮೀ. ಗಡಿಯನ್ನು ದಾಟುವ ಹಂಬಲದಲ್ಲಿದ್ದಾರೆ. ಕಳೆದ ವರ್ಷ ಡೈಮಂಡ್​ ಲೀಗ್​ನಲ್ಲಿ 89.94 ಮೀ. ಎಸೆದಿದ್ದು ಅವರ ಗರಿಷ್ಠ ದೂರದ ಎಸೆತವಾಗಿದೆ. ಜೂನ್​ 30ರ ಲಾಸನ್ನೆ ಡೈಮಂಡ್​ ಲೀಗ್​ ಬಳಿಕ 25 ವರ್ಷದ ನೀರಜ್​ ಮೊದಲ ಬಾರಿ ಕಣಕ್ಕಿಳಿಯಲಿದ್ದಾರೆ. ಗಾಯದಿಂದಾಗಿ 2 ತಿಂಗಳು ವಿಶ್ರಾಂತಿ ಪಡೆದ ಬಳಿಕ ಮರಳಿ ಕಣಕ್ಕಿಳಿಯುತ್ತಿರುವ ನೀರಜ್​ಗೆ ಜೆಕ್​ ಗಣರಾಜ್ಯದ ಜೇಕಬ್​ ವಡ್ಲೆಜ್​, ಜರ್ಮನಿಯ ಜೂಲಿಯನ್​ ವೆಬರ್​, ಹಾಲಿ ಚಾಂಪಿಯನ್​ ಆಂಡರ್​ಸನ್​ ಪೀಟರ್ಸ್​ ಪ್ರಬಲ ಪ್ರತಿಸ್ಪರ್ಧಿಗಳಾಗಿದ್ದಾರೆ.

ಕಳೆದ ಏಷ್ಯನ್​ ಚಾಂಪಿಯನ್​ಷಿಪ್​ ರಜತ ಪದಕ ಗೆದ್ದಿದ್ದ 23 ವರ್ಷದ ಮನುಗೆ ಕನ್ನಡಿಗರೇ ಆದ ಕಾಶಿನಾಥ್​ ನಾಯ್ಕ್​ ಕೋಚ್​ ಆಗಿದ್ದಾರೆ. ಸೈನಿಕರಾಗಿರುವ ಮನು, ಗರಿಷ್ಠ 84.35 ಮೀ. ಎಸೆತದ ದಾಖಲೆ ಹೊಂದಿದ್ದಾರೆ. ಶುಕ್ರವಾರ ಅರ್ಹತಾ ಸುತ್ತಿನ ಸ್ಪರ್ಧೆಗಳು, ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 1.40ಕ್ಕೆ ಆರಂಭಗೊಳ್ಳಲಿದೆ. ಬಳಿಕ ಜಾವೆಲಿನ್​ ಸ್ಪರ್ಧೆಯ ಫೈನಲ್​ ಸ್ಪರ್ಧೆ ಭಾನುವಾರ ರಾತ್ರಿ 11.50ರಿಂದ ನಡೆಯಲಿದೆ. ಮೊಬೈಲ್​ನಲ್ಲಿ ಜಿಯೋ ಸಿನಿಮಾ ಆ್ಯಪ್​ ಮತ್ತು ಟಿವಿಯಲ್ಲಿ ಸ್ಪೋರ್ಟ್ಸ್​18 ಚಾನಲ್​ನಲ್ಲಿ ಸ್ಪರ್ಧೆಯನ್ನು ಉಚಿತವಾಗಿ ವೀಸಬಹುದು.

chaithra

Recent Posts

ಹಿಂದೂ ಧರ್ಮರಕ್ಷಣೆಗಾಗಿ ಹಿಂದೂ ರಾಷ್ಟ್ರ ಸ್ಥಾಪನೆಯ ಅವಶ್ಯಕತೆ

ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…

1 year ago

ಹಿಂದೂಗಳ ಜಾಗೃತಿಗಾಗಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿತ ಹಿಂದೂ ರಾಷ್ಟ್ರ-ಜಾಗೃತಿ ಸಭೆ !

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…

1 year ago

ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಅಪಮಾನ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ !

ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…

1 year ago

ಅಯೋಧ್ಯೆಯಲ್ಲಿ ಮದ್ಯ ನಿಷೇಧಕ್ಕೆ ಆಗ್ರಹ; ಮಾನ್ಯ ಮಾಡಿದ ಯೋಗಿ ಸರಕಾರಕ್ಕೆ ಅಭಿನಂದನೆ !

ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…

1 year ago

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿ

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…

1 year ago