ಭಾರತೀಯರಿಗೆ ಮಣ್ಣು ಪೂಜನೀಯ : ಕೃಷಿ ವಿಜ್ಞಾನಿ ಡಾ.ಎಸ್.ಎ.ಪಾಟೀಲ್ ಅಭಿಮತ

By: Ommnews

Date:

Share post:

ಗೋದುತಾಯಿ ಕಾಲೇಜಿನಲ್ಲಿ ಮೇರಿ ಮಾಟಿ ಮೇರಾ ದೇಶ್ ಕಾರ್ಯಕ್ರಮ : ಗೌಡರ ಮಾತಿಗೆ ಪುಳಕಿತಗೊಂಡ ವಿದ್ಯಾರ್ಥಿನಿಯರು.

Advertisement
Advertisement
Advertisement


ನಮ್ಮ ದೇಶದ ಜನ ಮಣ್ಣಿನ ಜತೆ ಗಾಢ ಸಂಬAಧ ಹೊಂದಿದ್ದು ಅದನ್ನು ಪೂಜಿಸಿ, ಗೌರವಿಸುತ್ತಾರೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎಸ್.ಎ.ಪಾಟೀಲ್ ಹೇಳಿದರು.
ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಂತರವಾಣಿ ೯೦.೮ ಸಮುದಾಯ ರೇಡಿಯೋ ಮತ್ತು ಗೋದೂತಾಯಿ ಮಹಾವಿದ್ಯಾಲಯ ಸಹಯೋಗದಲ್ಲಿ ಆಯೋಜಜಿಸಿದ್ದ ಮೇರಿ ಮಾಟಿ ಮೇರಾ ದೇಶ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಹೇ ಮಿಟ್ಟಿ ಕಾ ನಮನ್, ವೀರೋಂಕೋ ವಂದನ್ ಎನ್ನುವ ಟ್ಯಾಗ್ ಲೈನ್ ಹೊಂದಿರುವ ಈ ಕಾರ್ಯಕ್ರಮವು ಕೇಂದ್ರ ಸರ್ಕಾರ ಆಯೋಜಿಸುತ್ತಿರುವುದು ಶ್ಲಾಘನೀಯ. ಪೂಜ್ಯ ದೊಡ್ಡಪ್ಪ ಅಪ್ಪ, ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು ನಮ್ಮ ದೇಶದ ಮಣ್ಣು ಬಹಳ ಉತ್ಕೃಷ್ಟವಾಗಿದೆ ಎಂದು ಹೇಳುತ್ತಿದ್ದರು. ಈ ದೇಶದ ಮಣ್ಣಿನಲ್ಲಿ ಜೀವಕಳೆ ತುಂಬಿದೆ. ಇಂತಹ ಪ್ರಕೃತಿ ನೀಡಿದ ಕೊಡುಗೆಯನ್ನು ನಾವೆಲ್ಲರೂ ಪೂಜಿಸಬೇಕು, ಗೌರವಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿದರು.
ಶರಣಬಸವೇಶ್ವರ ದೇವಸ್ಥಾನ ಆವರಣದ ಶಾಲಾ-ಕಾಲೇಜುಗಳ ನಿರ್ದೇಶಕಿ ಡಾ. ನೀಲಾಂಬಿಕಾ ಶೇರಿಕಾರ್ ಮಾತನಾಡಿ, ಇಂತಹ ಕಾರ್ಯಕ್ರಮವು ಕೇಂದ್ರ ಸರ್ಕಾರ ಆಯೋಜಿಸುತ್ತಿರುವುದು ಶ್ಲಾಘನೀಯ. ನಿಷ್ಕಲ್ಮಷವಾದ ಮಣ್ಣು ಕಾಮಧೇನು ಕಲ್ಪವೃಕ್ಷವಾಗಿದೆ. ಮನುಷ್ಯ ಜನ್ಮದಿಂದ ಸಾಯುವರೆಗೂ ಮಣ್ಣು ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನು ಉಳಿಸಿಕೊಂಡು ಹೋಗುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ತಿಳಿಸಿದರು.
ಮಹಾವಿದ್ಯಾಲಯ ಪ್ರಾಚಾರ್ಯೆ ಜಾನಕಿ ಹೊಸೂರ್ ಮಾತನಾಡಿ, ಮಣ್ಣಿನ ಮಹತ್ವ, ಸಂರಕ್ಷಣೆ ಬಗ್ಗೆ ಹೆಚ್ಚು ಅರಿತುಕೊಳ್ಳುವುದು ಅಗತ್ಯ. ಅಮೃತ ಮಹೋತ್ಸವದ ಜತೆಗೆ ೭೬ನೇ ಸ್ವಾತಂತ್ರÈ ಅಂಗವಾಗಿ ಕೇಂದ್ರ ಸರ್ಕಾರ ಈ ಅಭಿಯಾನ ಆರಂಭಿಸಿದೆ. ದೇಶಾದ್ಯಂತ ಅಮೃತ ಕಲಶ ಯಾತ್ರೆಗೆ ಸಾಕ್ಷಿಯಾಗಲಿದೆ. ಇದು ಭಾರತದ ಪ್ರತಿ ಕಾರ್ನರ್‌ನಿಂದ ದೆಹಲಿಗೆ ೭೫೦೦ ಕಲಶಗಳಲ್ಲಿ ಮಣ್ಣು ಸಾಗಿಸುವ ಕಾರ್ಯಕ್ರಮ ಸರ್ಕಾರ ಹೊಂದಿದೆ ಎಂದು ಹೇಳಿದರು.
ಅಂತರವಾಣಿ ನಿರ್ದೇಶಕ ಡಾ.ಶಿವರಾಜ ಶಾಸ್ತಿç ಹೆರೂರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಡಾ.ಪುಟ್ಟಮಣಿ ದೇವಿದಾಸ ಕಾರ್ಯಕ್ರಮ ನಿರೂಪಿಸಿದರೆ, ದಾಕ್ಷಾಯಿಣಿ ಕಾಡಾದಿ ವಂದಿಸಿದರು.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section