ಟಾಸ್ಕ್‌ವೊಂದರಲ್ಲಿ ಸಮಸ್ಯೆ ಆದ ಕಾರಣ ಡ್ರೋನ್ ಪ್ರತಾಪ್, ಸಂಗೀತಾ ಅವರು ಬಿಗ್ ಬಾಸ್ ಮನೆಯಿಂದ ಆಸ್ಪತ್ರೆ ಸೇರಿದ್ದರು. ಎರಡು ದಿನವಾದರೂ ಅವರು ಬಿಗ್ ಬಾಸ್ ಮನೆಗೆ ಬಂದಿರಲಿಲ್ಲ. ‘ವಾರದ ಕಥೆ ಕಿಚ್ಚನ ಜೊತೆ’ ಎಪಿಸೋಡ್‌ಗೆ ಇವರಿಬ್ಬರು ಬರುತ್ತಾರಾ? ಇಲ್ಲವಾ? ಎಂಬ ಪ್ರಶ್ನೆ ಎದುರಾಗಿತ್ತು. ಈಗ ಕಲರ್ಸ್ ಕನ್ನಡ ವಾಹಿನಿಯು ಹೊಸ ಪ್ರೋಮೋವೊಂದನ್ನು ರಿಲೀಸ್ ಮಾಡಿದ್ದು, ಅದರಲ್ಲಿ ಪ್ರತಾಪ್, ಸಂಗೀತಾ ಮರಳಿ ಮನೆಗೆ ಬಂದಿರೋದು ರಿವೀಲ್ ಆಗಿದೆ.
ಚೇರ್ ಆಫ್ ಥಾರ್ನ್ಸ್’ ಟಾಸ್ಕ್ ಪ್ರಕಾರ ಕುರ್ಚಿ ಮೇಲೆ ಕುಳಿತ ನಾಲ್ವರು ಗಂಧರ್ವರ ಪೈಕಿ ಇಬ್ಬರನ್ನು ರಾಕ್ಷಸರು ಎಬ್ಬಿಸಬೇಕಿತ್ತು. ಆಗ ವಿನಯ್ ತಂಡದವರು ರಾಕ್ಷಸರಾಗಿದ್ದರೆ, ಸಂಗೀತಾ ತಂಡದವರು ಗಂಧರ್ವರಾಗಿದ್ದರು. ಆದಷ್ಟು ಬೇಗ ಕುರ್ಚಿ ಮೇಲಿದ್ದವರನ್ನು ಎಬ್ಬಿಸಬೇಕು ಅಂತ ವಿನಯ್ ಗೌಡ, ಮೈಕಲ್, ವರ್ತೂರು ಸಂತೋಷ್ ಅವರು ಸೋಪಿನ ನೀರನ್ನು ಸ್ವಲ್ಪವೂ ಗ್ಯಾಪ್ ಕೊಡದೆ ಬೀಸಿ ಬೀಸಿ ಹೊಡೆದಿತ್ತು. ಸಂಗೀತಾ ಅವರು ಆರಂಭದಲ್ಲಿ ಕೂಗಿದರು, ಆದರೂ ಯಾರೂ ಸುಮ್ಮನೆ ಇರಲಿಲ್ಲ, ಕೊನೆಗೂ ಸಂಗೀತಾ ಅವರು ಕುರ್ಚಿಯಿಂದ ಎದ್ದರು. ಪ್ರತಾಪ್ ಅವರಿಗೆ ಮತ್ತೆ ನೀರು ಬೀಸಿ ಬೀಸಿ ಹೊಡೆದಾಗ ಬಿಗ್ ಬಾಸ್ ಟಾಸ್ಕ್‌ನ್ನು ರದ್ದು ಮಾಡಿದರು.
ಮುಖಕ್ಕೆ, ಕಣ್ಣಿಗೆ ಸಿಕ್ಕಾಪಟ್ಟೆ ಸೋಪಿನ ನೀರು ಹೋಗಿತ್ತು. ಹೀಗಾಗಿ ಅವರಿಬ್ಬರನ್ನು ಆಸ್ಪತ್ರೆಗೆ ಕಳಿಸಲಾಗಿತ್ತು. ಎರಡು ದಿನಗಳ ಬಳಿಕ ಅವರು ಬಿಗ್ ಬಾಸ್ ಮನೆಗೆ ಮರಳಿದ್ದಾರೆ.