ಕೊಚ್ಚಿ: ಮಾಲಿವುಡ್ ಸಿನಿರಂಗದ ಖ್ಯಾತ ನಟಿಯೊಬ್ಬರು ಹಠಾತ್ ಹೃದಯಾಘಾತದಿಂದ ನಿಧನರಾಗಿದ್ದು, ಮಾಲಿವುಡ್ ರಂಗಕ್ಕೆ ಆಘಾತನ್ನುಂಟು ಮಾಡಿದೆ.
ಲಕ್ಷ್ಮಿಕಾ ಸಜೀವನ್ (24) ಯುನೈಟೆಡ್ ಅರಬ್ ಎಮಿರೇಟ್ಸ್‌ನ ಶಾರ್ಜಾದಲ್ಲಿ ಶುಕ್ರವಾರ(ಡಿ.8 ರಂದು) ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
ಶಾರ್ಜಾದಲ್ಲಿರುವ ಬ್ಯಾಂಕ್ ವೊಂದರಲ್ಲಿ ಇದ್ದಾಗ ಅವರಿಗೆ ಹಠಾತ್ ಹೃದಯಾಘಾತವಾಗಿದೆ ಎಂದು ವರದಿ ತಿಳಿಸಿದೆ.
ಅವರ ನಿಧನಕ್ಕೆ ಮಾಲಿವುಡ್ ಕಂಬನಿ ಮಿಡಿದಿದೆ.