ಅಂಗನವಾಡಿಯಿಂದ ಪೌಷ್ಟಿಕ ಆಹಾರ ಸಾಮಾಗ್ರಿಗಳನ್ನು ಕದ್ದೊಯ್ದ ಕಳ್ಳರು

By: Ommnews

Date:

Share post:

ಬೆಳ್ಳಾರೆ : ಮಕ್ಕಳು ಹಾಗೂ ಗರ್ಭಿಣಿ ಬಾಣಂತಿಯರಿಗೆ ವಿತರಿಸಲು ಇಟ್ಟಿರುವ ಪೌಷ್ಟಿಕ ಆಹಾರ ಸಾಮಾಗ್ರಿಗಳನ್ನು ಕದ್ದೊಯ್ದ ಘಟನೆ ಕೊಡಿಯಾಲ ಗ್ರಾಮದ ಮೂವಪ್ಪೆ ಅಂಗನವಾಡಿ ಕೇಂದ್ರದಲ್ಲಿ ನಡೆದಿದೆ.

Advertisement
Advertisement
Advertisement

ಅ.19 ರಂದು ರಾತ್ರಿ ಮೂವಪ್ಪೆ ಅಂಗನವಾಡಿ ಕೇಂದ್ರಕ್ಕೆ ಕನ್ನ ಹಾಕಿರುವ ಕಳ್ಳರು , ಅಂಗನವಾಡಿಯ ಹಂಚು ತೆಗೆದು ಒಳಹೊಕ್ಕು ತಡಕಾಡಿದ್ದಾರೆ. ಬಳಿಕ ಸುಮಾರು 9,690 ರೂ. ಮೌಲ್ಯದ ಮಕ್ಕಳ ಆಹಾರ ಸಾಮಾಗ್ರಿ ಹೊತ್ತೊಯ್ದಿದ್ದಾರೆ.

ಮರುದಿನ ಈ ವಿಚಾರ ಗಮನಕ್ಕೆ ಬಂದ ಮೇಲೆ ಅಂಗನವಾಡಿ ಕಾರ್ಯಕರ್ತೆ ಮೋಹಿನಿ ಇಲಾಖೆಗೆ ಮಾಹಿತಿ ನೀಡಿ ನಂತರ ಪೊಲೀಸ್ ದೂರು ಸಲ್ಲಿಸಿದ್ದಾರೆ. ಬೆಳ್ಳಾರೆ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section