ರೈಲ್ವೆ ಸೇತುವೆ ರಾಡ್ ಗೆ ವಾಹನ ಡಿಕ್ಕಿ: ತಪ್ಪಿದ ಅನಾಹುತ

0
114

ಬಂಟ್ವಾಳ: ಶತಮಾನದ ಉಕ್ಕಿನ ಸೇತುವೆಯಾಗಿರುವ ಪಾಣೆಮಂಗಳೂರು ಬ್ರಿಡ್ಜ್ ನ ಮಧ್ಯ ಭಾಗದಲ್ಲಿ ಸಣ್ಣದಾದ ಬಿರುಕು ಕಂಡ ಕಾರಣಕ್ಕಾಗಿ ಘನಗಾತ್ರದ ವಾಹನಗಳು ಸಂಚಾರ ನಿಷೇಧ ಹೇರಿ ಇಲಾಖೆ ಹಾಕಲಾಗಿದ್ದ ಕಬ್ಬಿಣದ ತಡೆಗೆ ವಾಹನವೊಂದು ಡಿಕ್ಕಿ ಹೊಡೆದ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಸೇತುವೆ ಪ್ರವೇಶಕ್ಕೆ ಮೊದಲು ಘನಗಾತ್ರದ ವಾಹನಗಳ ನಿರ್ಬಂಧ ಮಾಡಲಾಗಿರುವ ಬಗ್ಗೆ ಯಾವುದೇ ಸೂಚನಾ ಫಲಕಗಳನ್ನು ಹಾಕದ ಹಿನ್ನೆಲೆಯಲ್ಲಿ ಅರಿವಿಲ್ಲದೆ ಗೂಡ್ಸ್ ಟೆಂಪೋವೊಂದು ಸೇತುವೆಯಲ್ಲಿ ಸಂಚಾರ ಮಾಡಿದಾಗ ರಾಡ್ ಕೆಳಕ್ಕುರಳಿ ಬಿದ್ದಿದೆ.

ಅದೃಷ್ಟವಶಾತ್ ರಾಡ್ ಬೀಳುವ ವೇಳೆ ಹಿಂಬದಿಯಿಂದ ವಾಹನವಿಲ್ಲದ ಕಾರಣಕ್ಕಾಗಿ ಯಾವುದೇ ಪ್ರಾಣಹಾನಿ ನಡೆದಿಲ್ಲ. ‌ಕಾಮಗಾರಿ ನಡೆಸಿದವರು ಸರಿಯಾಗಿ ರಾಡನ್ನು ಅಳವಡಿಸಿಲ್ಲ ಎಂಬ ಆರೋಪಗಳು ಕೂಡ ಕೇಳಿ ಬಂದಿದೆ.

ಕೆಲಹೊತ್ತು ಸಂಚಾರಕ್ಕೆ ಅಡ್ಡಿಯಾಗಿತ್ತು. ಸ್ಥಳೀಯರು ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟ ಬಳಿಕ ಮತ್ತೆ ರಾಡನ್ನು ಮೇಲಕ್ಕೆ ಸಿಕ್ಕಿಸಿದ್ದಾರೆ.

ಇಲಾಖೆ ಕಾಮಗಾರಿ ಮಾಡುವಾಗ ಅದರಿಂದಾಗುವ ಪರಿಣಾಮಗಳ ಬಗ್ಗೆ ಅರಿತು ಕೆಲಸ ಮಾಡಬೇಕಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here