ಮಂಗಳೂರು, ಅ. 5 : ಪುತ್ತೂರಿನ ವಿವೇಕಾನಂದ ಕಾಲೇಜು, ಮೂಡು ಬಿದಿರೆಯ ಆಳ್ವಾಸ್ ಕಾಲೇಜು ಹಾಗೂ ಉಡುಪಿಯ ಪೂರ್ಣಪ್ರಜ್ಞ ಕಾಲೇಜುಗಳಿಗೆ ಸ್ವಾಯತ್ತ ಸ್ಥಾನಮಾನವನ್ನು ನೀಡಲು ಮಂಗಳೂರು ವಿಶ್ವವಿದ್ಯಾನಿಲಯವು ಒಪ್ಪಿಗೆ ನೀಡಿದ್ದು, ವರದಿಯನ್ನು ಸರಕಾರಕ್ಕೆ ಮಂಡಿಸಲು ಅನುಮೋದನೆ ದೊರೆತಿದೆ.
ಬುಧವಾರ ನಡೆದ ಮಂಗಳೂರು ವಿ.ವಿ.ಯ ಶೈಕ್ಷಣಿಕ ಮಂಡಳಿಯ 2023-24ನೇ ಸಾಲಿನ ದ್ವಿತೀಯ ಸಾಮಾನ್ಯ ಸಭೆಯಲ್ಲಿ ಅವಿಭಜಿತ ಜಿಲ್ಲೆಯ 3 ಕಾಲೇಜುಗಳಿಗೆ ಸ್ವಾಯತ್ತ ಸ್ಥಾನಮಾನ ನೀಡುವ ಮಹತ್ವದ ನಿರ್ಧಾರವನ್ನು ಪ್ರಕಟಿಸಲಾಯಿತು.
ಕುಲಪತಿ (ಪ್ರಭಾರ) ಪ್ರೊ| ಜಯರಾಜ್ ಅಮೀನ್ ಮಾತನಾಡಿ, ಮಂಗಳೂರು ವಿ.ವಿ. ಸಂಯೋಜಿತ 3 ಕಾಲೇಜುಗಳಿಗೆ ಸ್ವಾಯತ್ತ ಸ್ಥಾನಮಾನಕ್ಕೆ ಯುಜಿಸಿಯಿಂದ ಅನುಮತಿ ದೊರೆತಿದೆ. ಮುಂದುವರಿದ ಭಾಗವಾಗಿ ವಿ.ವಿ.ಯಿಂದ ರಚಿಸಲಾದ ಸ್ಥಾಯೀ ಸಮಿತಿಯು 3 ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸ್ವಾಯತ್ತ ಸ್ಥಾನಮಾನದ ಬಗ್ಗೆ ಪೂರಕ ವರದಿಯನ್ನು ನೀಡಿದೆ.
ವರದಿಯನ್ನು ಸಿಂಡಿಕೇಟ್ ಸದಸ್ಯರಿಗೆ ರವಾನಿಸಲಾಗಿದ್ದು, ಇಬ್ಬರು ಸದಸ್ಯರಿಂದ ಮಾತ್ರ ವಿವರ ರಹಿತ ಆಕ್ಷೇಪಣೆ ಬಂದಿದೆ. ಉಳಿದ ಸದಸ್ಯರಿಂದ ಯಾವುದೇ ಅಭಿಪ್ರಾಯ ಬಾರದ ಹಿನ್ನೆಲೆಯಲ್ಲಿ ವರದಿ ಅನುಮೋದಿಸಿ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿದೆ. ಅ. 12ರಂದು ಸಿಂಡಿಕೇಟ್ ಸಭೆಯಲ್ಲಿ ಇದನ್ನು ಮಂಡಿಸಲಾಗುತ್ತದೆ. ಬಳಿಕ ಸರಕಾರಕ್ಕೆ ವರದಿ ಕಳುಹಿಸಿ ಅನುಮತಿ ದೊರೆಯಬೇಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕುಲಸಚಿವ (ಆಡಳಿತ) ರಾಜು ಕೆ., ಕುಲಸಚಿವ (ಪರೀಕ್ಷಾಂಗ) ರಾಜು ಕೃಷ್ಣ ಚಲ್ಲಣ್ಣನವರ್, ಹಣಕಾಸು ಅಧಿಕಾರಿ ಡಾ| ಸಂಗಪ್ಪ ಉಪಸ್ಥಿತರಿದ್ದರು.
ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…
ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…
ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…
ದಿನಾಂಕ 31 ಡಿಸೆಂಬರ್ 2023 ರಂದು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಬೆಳ್ತಂಗಡಿ ತಾಲೂಕಿನ ಉಜಿರೆ ಶ್ರೀ ವ್ಯಾಘ್ರ ಚಾಮುಂಡೇಶ್ವರಿ…
ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…
ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…