ರಾಜ್ಯ

ಕಾಂಗ್ರೆಸ್ ಅಂದ್ರೆ ಹಿಂದೂ ವಿರೋಧಿ ಅನ್ನೋದು ಸ್ಪಷ್ಟವಾಗಿದೆ: ಅಶ್ವಥ್ ನಾರಾಯಣ್

ಬೆಂಗಳೂರು, ಅ.4 : ಕಾಂಗ್ರೆಸ್ ಎಂದರೆ ಹಿಂದೂ ವಿರೋಧಿ ಅನ್ನೋದನ್ನು ಆ ಪಕ್ಷದ ನಾಯಕರೇ ಸ್ಪಷ್ಟವಾಗಿ ವ್ಯಕ್ತಪಡಿಸುತ್ತಿದ್ದಾರೆ ಎಂದು ಮಾಜಿ ಸಚಿವ ಅಶ್ವಥ್ ನಾರಾಯಣ್ ಹೇಳಿಕೆ ನೀಡಿದ್ದಾರೆ.

Advertisement
Advertisement
Advertisement

ಶಿವಮೊಗ್ಗ ಗಲಭೆ ಪ್ರಕರಣದ ಹಿನ್ನೆಲೆ ಸ್ಥಳಕ್ಕೆ ಬಿಜೆಪಿ ಸತ್ಯ ಶೋಧನೆ ತಂಡ ಭೇಟಿ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ವಾಸ್ತವತೆ ಮತ್ತು ನೊಂದ ನಾಗರಿಕರನ್ನು ಮಾತನಾಡಿಸಿ ವಾಸ್ತವ ಸ್ಥಿತಿ ಪರಿಶೀಲನೆ ಮಾಡುತ್ತೇವೆ. ಬಳಿಕ ಸರ್ಕಾರದ ಮೇಲೆ ಸೂಕ್ತ ಕ್ರಮ ವಹಿಸುವ ಬಗ್ಗೆ ಸಮಾಲೋಚನೆ ಮಾಡುತ್ತೇವೆ ಎಂದು ತಿಳಿಸಿದರು.

ಭಯದ ಭಾವನೆ ಪರಿಸ್ಥಿತಿಯನ್ನು ಗಂಭೀರವಾಗಿ ತೆಗೆದುಕೊಂಡು ಸ್ಥಳೀಯರ ಹಿತ ಸಂರಕ್ಷಣೆ ಮಾಡಲು ಸರ್ಕಾರದ ಮೇಲೆ ಒತ್ತಡ ಹೇರುತ್ತೇವೆ. ಅಧಿಕಾರಿಗಳಿಗೂ ಜನರಿಗೆ ನಿರ್ಭೀತಿಯಾಗಿ ವ್ಯವಸ್ಥೆ ಮಾಡಲು ಜನರ ಪ್ರತಿನಿಧಿಗಳಾಗಿ ಒತ್ತಾಯ ಮಾಡುತ್ತೇವೆ. ಆಸ್ಪತ್ರೆಗೆ ಭೇಟಿ ಕೊಡುತ್ತೇವೆ, ಗಾಯಳುಗಳನ್ನು ಭೇಟಿ ಮಾಡಿ ಬರುತ್ತೇವೆ ಎಂದು ಹೇಳಿದರು.

ಗಲಭೆ ವಿಚಾರವಾಗಿ ಕಾಂಗ್ರೆಸ್ ಓಲೈಕೆ ರಾಜಕಾರಣ ಮಾಡುತ್ತಿದೆ. ದೊಡ್ಡ ಬಹುಮತ ಬಂದಿದೆ, ನಾವು ಏನು ಬೇಕಾದರೂ ಮಾಡಬಹುದು. ನಮಗೆ ಲೈಸೆನ್ಸ್ ಕೊಟ್ಟಿದ್ದಾರೆ ಅನ್ನೋ ಮನಸ್ಥಿತಿ ಇದು. ಸಣ್ಣ ಗಲಾಟೆಯಾದಾಗ ರಾಹುಲ್ ಗಾಂಧಿ, ರಾಷ್ಟ್ರೀಯ ನಾಯಕರು, ಮತ್ತೊಬ್ಬರು ಎಲ್ಲಾರು ಭೇಟಿ ಮಾಡುತ್ತಾರೆ. ಆದರೆ ಇಲ್ಲಿಗ್ಯಾಕೆ ಯಾರು ಬರ್ತಿಲ್ಲ? ಶಿವಮೊಗ್ಗಕ್ಕೆ ಭೇಟಿ ಮಾಡಿ, ಸ್ಥಳ ಪರಿಶೀಲನೆ ಮಾಡಿ ನೊಂದವರನ್ನು ಯಾಕೆ ಭೇಟಿ ಆಗುತ್ತಿಲ್ಲ ಎಂದು ಪ್ರಶ್ನಿಸಿದರು.

ಹೊಡೆಯುವುದು, ಗಲಭೆ ನಿರ್ಮಾಣಕ್ಕೆ ಪೂರಕವಾದ ಕೆಲಸ ಮಾಡುವುದೇ ಕಾಂಗ್ರೆಸ್ ಪಕ್ಷ. ಅನೇಕ ಬಾರಿ ಜನ ಕಾಂಗ್ರೆಸ್‌ಗೆ ಬುದ್ಧಿ ಕಲಿಸಿದ್ದರು. ಅವರು ಮಾತ್ರ ಹಳೇ ಬುದ್ಧಿ ಬಿಡುತ್ತಿಲ್ಲ. ರಾಮಲಿಂಗಾರೆಡ್ಡಿಯವರ ಹೇಳಿಕೆ ಕೂಡ ಮೊಂಡುತನವನ್ನು ಪ್ರದರ್ಶನ ಮಾಡುತ್ತಿದೆ. ಉದ್ದಟತನದ ಮಾತುಗಳು ಇದು. ಕಾಂಗ್ರೆಸ್ ಎಂದರೆ ಆ್ಯಂಟಿ ಹಿಂದೂ ಅನ್ನೋದನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತಿದ್ದಾರೆ ಅಷ್ಟೇ ಎಂದು ಅಶ್ವಥ್ ನಾರಾಯಣ್ ಗುಡುಗಿದರು.

chaithra

Recent Posts

ಹಿಂದೂ ಧರ್ಮರಕ್ಷಣೆಗಾಗಿ ಹಿಂದೂ ರಾಷ್ಟ್ರ ಸ್ಥಾಪನೆಯ ಅವಶ್ಯಕತೆ

ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…

2 years ago

ಹಿಂದೂಗಳ ಜಾಗೃತಿಗಾಗಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿತ ಹಿಂದೂ ರಾಷ್ಟ್ರ-ಜಾಗೃತಿ ಸಭೆ !

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…

2 years ago

ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಅಪಮಾನ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ !

ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…

2 years ago

ಅಯೋಧ್ಯೆಯಲ್ಲಿ ಮದ್ಯ ನಿಷೇಧಕ್ಕೆ ಆಗ್ರಹ; ಮಾನ್ಯ ಮಾಡಿದ ಯೋಗಿ ಸರಕಾರಕ್ಕೆ ಅಭಿನಂದನೆ !

ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…

2 years ago

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿ

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…

2 years ago