‘ಹ್ಯಾರಿ ಪಾಟರ್‘ ಸರಣಿ ಸಿನಿಮಾಗಳು ಸೇರಿದಂತೆ ಹಲವು ಇಂಗ್ಲೀಷ್ ಸಿನಿಮಾಗಳಲ್ಲಿ ನಟಿಸಿರುವ ನಟ ಮೈಖಲ್ ಗ್ಯಾಂಬನ್ ನಿಧನ ಹೊಂದಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಮೈಖಲ್ ಬಳಲುತ್ತಿದ್ದರು. ಕುಟುಂಬದವರು ನೀಡಿರುವ ಹೇಳಿಕೆಯಂತೆ ಮೈಖಲ್ ಬೌಟ್ ನಿಮೋನಿಯಾದಿಂದ ಅವರು ಇಂಗ್ಲೆಂಡ್ನ ಎಸ್ಸೆಕ್ಸ್ನಲ್ಲಿ ನಿಧನ ಹೊಂದಿದ್ದಾರೆ.
ಗ್ಯಾಂಬನ್ ನಿಧನಕ್ಕೆ ಹಲವು ಹಾಲಿವುಡ್ ಗಣ್ಯರು ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.