engineersday2023 ಪುತ್ತೂರು; ಪುತ್ತೂರು ರೋಟರಿ ಎಲೈಟ್ ಇದರ ಆಶ್ರಯದಲ್ಲಿ ಇಂಜಿನಿಯರ್ಸ್ ಡೇ ದಿನವನ್ನು ಸುದಾನ ಸಭಾಂಗಣದಲ್ಲಿ ಆಚರಿಸಲಾಯಿತು ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಬಂದಂತಹ ಜಿಲ್ಲಾ ರೋಟರಿ ಇದರ ವಲಯ ಐದರ ಲೀಡರ್ಶಿಪ್ ಡೆವಲಪ್ಮೆಂಟ್ ಇದರ ಕೋಆರ್ಡಿನೇಟರ್ ಆಗಿರುವ ರೊ. ಸುಧೀರ್ ಬಿ ಯವರು ಮಾತಾಡಿ ದೇಶ ಕಂಡ ಮೂರು ಮಹಾನ್ ವ್ಯಕ್ತಿಗಳಲ್ಲಿ ಓರ್ವರಾದ ಸರ್ ಎಂ ವಿಶ್ವೇಶ್ವರಯ್ಯ ರವರ ಜೀವನದ ಆದರ್ಶಗಳನ್ನು ಇಂದಿನ ಇಂಜಿನಿರುಗಳು ಪಾಲಿಸಬೇಕು ಅವರ ದೂರ ದೃಷ್ಟಿಯನ್ನು ತಮ್ಮ ಯೋಜನೆಯಲ್ಲಿ ಅಳವಡಿಸಿದಾಗ ವಿಶ್ವದಲ್ಲಿಯೇ ನಮ್ಮ ದೇಶ ಸಮಗ್ರತೆಯನ್ನು ಕಾಣಬಹುದು. ಯುವಜನರಲ್ಲಿ ನೈಪುಣ್ಯತೆಗೆ ಕೊರತೆ ಇಲ್ಲ ದುರದೃಷ್ಟ ವಸಾತ್ ಅದು ಸರಿಯಾಗಿ ಬಳಕೆಯಾಗುತ್ತಿಲ್ಲ ಎಂದು ಹೇಳಿದರು. ಅಧ್ಯಕ್ಷರು ರಜಾಕ್ ಕಬಕಕಾರ್ಸ್ ರವರು ಸ್ವಾಗತಿಸಿದರು. ಆಸ್ಕರ್ ಆನಂದ ರವರು ವರದಿ ವಾಚಿಸಿದರು. ವೃತ್ತಿಸೇವಾ ನಿರ್ದೇಶಕಿ ಹರಿಣಿ ಪುತ್ತೂರಾಯ ಸಂದರ್ಭೋಚಿತವಾಗಿ ಮಾತನಾಡಿದರು. ಈಶ್ವರ್ ಬೇಡೆಕರ್ ಪ್ರಾರ್ಥಿಸಿದರು. ಮೌನೇಶ ವಿಶ್ವಕರ್ಮ ಕಾರ್ಯಕ್ರಮ ನಿರೂಪಿಸಿದರು .ಈ ಸಂದರ್ಭದಲ್ಲಿ ಕ್ಲಬ್ಬಿನ ಒಟ್ಟು 15 ಇಂಜಿನಿಯರ್ ಗಳನ್ನು ಗುರುತಿಸಿ ಗೌರವಿಸಲಾಯಿತು.
rotaryputturelite #rotaryintenational #RotariansInAction #rotaryclub
