ದೆಹಲಿ, ಸೆ. 23: ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರು ಶನಿವಾರ ಅಹಮದಾಬಾದ್‌ನಲ್ಲಿ ಗೌತಮ್ ಅದಾನಿಯನ್ನು ಭೇಟಿಯಾಗಿದ್ದು, ಇಬ್ಬರೂ ಅಹಮದಾಬಾದ್‌ನಲ್ಲಿ ಭಾರತದ ಮೊದಲ ಲ್ಯಾಕ್ಟೋಫೆರಿನ್ ಪ್ಲಾಟ್‌ನ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಇದಾದ ನಂತರ ಪವಾರ್ ಅಹಮದಾಬಾದ್‌ನಲ್ಲಿರುವ ಅದಾನಿ ಅವರ ನಿವಾಸ ಮತ್ತು ಕಚೇರಿಗೆ ಭೇಟಿ ನೀಡಿದ್ದರು ಎಂದು ವರದಿಗಳು ತಿಳಿಸಿವೆ. ಭಾರತದ ಮೊದಲ ಲ್ಯಾಕ್ಟೋಫೆರಿನ್ ಪ್ಲಾಂಟ್ ಎಕ್ಸ್‌ಮ್‌ಪವರ್ ಅನ್ನು ಗುಜರಾತ್‌ನ ವಾಸ್ನಾ, ಚಚರ್ವಾಡಿಯಲ್ಲಿ ಗೌತಮ್ ಅದಾನಿ ಅವರೊಂದಿಗೆ ಉದ್ಘಾಟಿಸಿರುವುದು ವಿಶೇಷವಾಗಿದೆ” ಎಂದು ಪವಾರ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಶರದ್ ಪವಾರ್ ಅದಾನಿ ಜೊತೆಗಿನ ಆಪ್ತ ಸಂಬಂಧ ಕಾಣಿಸುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಆರಂಭದಲ್ಲಿ ಸಂದರ್ಶನವೊಂದರಲ್ಲಿ, ಶರದ್ ಪವಾರ್ ಅವರು ಅದಾನಿ ಗ್ರೂಪ್ ವಿರುದ್ಧದ ಆರೋಪಗಳನ್ನು ತನಿಖೆ ಮಾಡಲು ಜಂಟಿ ಸಂಸದೀಯ ಸಮಿತಿಯ ವಿಪಕ್ಷಗಳ ಬೇಡಿಕೆಯನ್ನು ವಿರೋಧಿಸಿದ್ದ, ಇದರ ಬದಲಿಗೆ ಸುಪ್ರೀಂಕೋರ್ಟ್ ಮೇಲ್ವಿಚಾರಣೆಯ ಸಮಿತಿಗ ಬಗ್ಗೆ ಒಲವು ತೋರುವುದಾಗಿ ಹೇಳಿದ್ದರು.
ಶರದ್ ಪವಾರ್ ತಮ್ಮ ಆತ್ಮಚರಿತ್ರೆ ಲೋಕ್ ಮೇಜ್ ಸಾಂಗಟಿಯಲ್ಲಿ ಗೌತಮ್ ಅದಾನಿಯನ್ನು ಕಠಿಣ ಪರಿಶ್ರಮಿ, ಸರಳ ಮತ್ತು ಕೆಳಮಟ್ಟದ ವ್ಯಕ್ತಿ ಎಂದು ಬಣ್ಣಿಸಿದ್ದಾರೆ. ಶರದ್ ಪವಾರ್ ಅವರ ಒತ್ತಾಯದ ಮೇರೆಗೆ ಗೌತಮ್ ಅದಾನಿ ಥರ್ಮಲ್ ಪವರ್ ಕ್ಷೇತ್ರಕ್ಕೆ ಕಾಲಿಟ್ಟರು ಎಂದು ಶರದ್ ಪವಾರ್ ತಮ್ಮ ಪುಸ್ತಕದಲ್ಲಿ ಅದಾನಿ ತನ್ನ ಕಾರ್ಪೊರೇಟ್ ಸಾಮ್ರಾಜ್ಯವನ್ನು ಮೊದಲಿನಿಂದ ಹೇಗೆ ನಿರ್ಮಿಸಿದರು ಎಂಬುದನ್ನು ವಿವರಿಸಿದ್ದಾರೆ.