ಕಿರುತೆರೆ

ಬಿಗ್ ಬಾಸ್​ 10ನೇ ಸೀಸನ್​ ಆರಂಭಕ್ಕೆ ಡೇಟ್​ ಫಿಕ್ಸ್

ಬಿಗ್ ಬಾಸ್ ಕನ್ನಡ: ಟಿವಿ ಪರದೆ ಮೇಲೆ ದೊಡ್ಮನೆ ಆಟ ನೋಡಲು ಕಾಯ್ತಿದ್ದ ಪ್ರೇಕ್ಷಕರಿಗೆ ಗುಡ್​ ನ್ಯೂಸ್​ ಸಿಕ್ಕಿದೆ. ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ಬಿಗ್​ಬಾಸ್ ಸೀಸನ್ 10ರ ಆರಂಭಕ್ಕೆ ಡೇಟ್​ ಫಿಕ್ಸ್ ಆಗಿದೆ​. ಅಕ್ಟೋಬರ್​ 8ರಿಂದ ಬಿಗ್ ಬಾಸ್​ ಸ್ಪರ್ಧಿಗಳ ಆಟ ಶುರುವಾಗಲಿದೆ.

ಊರ ಹಬ್ಬಕ್ಕೆ ಇಲ್ಲಿದೆ ರೀಸನ್; ಶುರುವಾಗ್ತಿದೆ HAPPY ‘BIGG BOSS KANNADA’ ಹತ್ತನೇ ಸೀಸನ್ ಅಕ್ಟೋಬರ್ 8 ರಿಂದ ನೋಡುವುದನ್ನು ಮಿಸ್​ ಮಾಡಲೇ ಬೇಡಿ ಎಂದು ಕಲರ್ಸ್​ ಕನ್ನಡ ಸೋಶಿಯಲ್ ಮೀಡಿಯಾ ಮೂಲಕ ಅಧಿಕೃತವಾಗಿ ಘೋಷಿಸಿದೆ.

ಊರ ಹಬ್ಬ ಮಾಡಲು ಇಲ್ಲಿದೆ ರೀಸನ್​

ಬಿಗ್ ಬಾಸ್​ ಪ್ರೋಮೋ ಇತ್ತೀಚಿಗಷ್ಟೇ ರಿಲೀಸ್​ ಆಗಿತ್ತು. ಊರ ಹಬ್ಬ ಮಾಡಲು ಇಲ್ಲಿದೆ ರೀಸನ್​ ಅದೇ ಶುರುವಾಗ್ತಿದೆ ಬಿಗ್​ ಬಾಸ್​ ಕನ್ನಡ 10ನೇ ಸೀಸನ್ ಎಂದು ಶುರುವಾಗು ಈ ಪ್ರೋಮೋ ಬಿಗ್ ಬಾಸ್​ ಶೋ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿದೆ. ‘ಬಿಗ್ ಬಾಸ್ ಕನ್ನಡ’ ಕಾರ್ಯಕ್ರಮದ ಲೋಗೋ ಪ್ರೊಫೈಲ್ ಪಿಕ್ಚರ್‌ , ಪ್ರೋಮೋ ಹಾಗೂ ಪ್ರತಿ ಅಪ್ಡೇಟ್​ ಅನ್ನು ಕಲರ್ಸ್ ಕನ್ನಡ ವಾಹಿನಿಯ ಅಧಿಕೃತ ಸೋಷಿಯಲ್ ಮೀಡಿಯಾ ಅಕೌಂಟ್‌ಗಳಲ್ಲಿ ಅಪ್‌ಡೇಟ್‌ ನೀಡಲಾಗುತ್ತಿದೆ.

ಬಿಗ್​ ಬಾಸ್​ ಮನೆಗೆ ಎಂಟ್ರಿ ಕೊಡುವ ಸ್ಪರ್ಧಿಗಳು ಯಾರು

ಕೆಜಿಎಫ್ ಖ್ಯಾತಿಯ ರೂಪ ರಾಯಪ್ಪ ಸೀಸನ್ 10ರಲ್ಲಿ ಕಾಣಿಸೋಕು ಪಕ್ಕಾ ಎನ್ನುವ ಮಾಹಿತಿ ಹೊರಬಿದ್ದಿದೆ. ಈ ಬಾರಿ ಬಿಗ್ ಮನೆಯಲ್ಲಿ ರಾಜಕಾರಣಿಯೊಬ್ಬರು ಕಾಣಿಸಿಕೊಳ್ಳುವ ಸಾಧ್ಯತೆ ಕೂಡ ಇದೆ. ಖ್ಯಾತ ರಾಜಕಾರಣಿ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ರಾಜಕೀಯ ಮಾಡುವ ಸಾಧ್ಯತೆ ಕೂಡ ಇದೆ ಎನ್ನಲಾಗ್ತಿದೆ. ನಾಗಿಣಿ ಸೀರಿಯಲ್ ಮೂಲಕ ಜನಪ್ರಿಯತೆ ಪಡೆದ ಸೀರಿಯಲ್ ನಟಿ ನಮ್ರತಾ ಗೌಡ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುತ್ತಾ ಜನಪ್ರಿಯತೆ ಪಡೆದ ಭೂಮಿ ಬಸವರಾಜ್ ಹೆಸರು ಬಿಗ್ ಬಾಸ್ ರೇಸ್ ನಲ್ಲಿದೆ.

ನೋಡೋಕೆ ಇದೆ ರೀಸನ್​ ಕಿಚ್ಚನ 10ನೇ ಸೀಸನ್​!

ಬಿಗ್ ಬಾಸ್ ಮೊದಲ ಸೀಸನ್‌ನಿಂದಲೂ ಒಂದು ಕುತೂಹಲ ಇದ್ದೇ ಇದೆ. ಶೋ ಶುರು ಆಗೊ ಮೊದಲು ಮತ್ತು ಶೋ ಮುಗಿಯೋ ಹಂತಕ್ಕೆ ಇನ್ನಿಲ್ಲದ ಕ್ಯೂರಿಯೋಸಿಟಿ ಕ್ರಿಯೇಟ್ ಆಗಿರುತ್ತದೆ. ನಿತ್ಯವೂ ಬಿಗ್ ಬಾಸ್ ನೋಡೊ ಮನೆ ಮಂದಿಯ ಕ್ರೇಜ್ ಬೇರೆ ಇರುತ್ತದೆ. ವಾರಾಂತ್ಯಕ್ಕೆ ಬರೋ ಕಿಚ್ಚನ ನೋಡೋಕೆ ಅದೆಷ್ಟೋ ಜನ ಕಾಯ್ತಾನೇ ಇರ್ತಾರೆ.

ಬಿಗ್ ಬಾಸ್ ನಲ್ಲಿ ಪ್ರಮುಖ ಆಕರ್ಷಣೆ ಏನು?

ಈ ಒಂದು ಕ್ವಶ್ಚನ್‌ಗೆ ಬರೋ ಉತ್ತರ ಒಂದೇ ಇದೆ. ಅದುವೇ ಕಿಚ್ಚ ಸುದೀಪ್ ಅಂತಲೇ ಹೇಳಬಹುದು. ಬಿಗ್ ಬಾಸ್ ಇಡೀ ಸೀಸನ್ ಹಿಂದೆ ದೊಡ್ಡ ತಂಡವೇ ಇರುತ್ತದೆ. ಆದರೆ ಬಿಗ್ ಬಾಸ್ ಅನ್ನ ಕಿಚ್ಚನಿಗೋಸ್ಕರವೇ ನೋಡುವ ಜನ ಜಾಸ್ತಿ ಇದ್ದಾರೆ.

chaithra

Recent Posts

ಹಿಂದೂ ಧರ್ಮರಕ್ಷಣೆಗಾಗಿ ಹಿಂದೂ ರಾಷ್ಟ್ರ ಸ್ಥಾಪನೆಯ ಅವಶ್ಯಕತೆ

ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…

2 years ago

ಹಿಂದೂಗಳ ಜಾಗೃತಿಗಾಗಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿತ ಹಿಂದೂ ರಾಷ್ಟ್ರ-ಜಾಗೃತಿ ಸಭೆ !

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…

2 years ago

ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಅಪಮಾನ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ !

ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…

2 years ago

ಅಯೋಧ್ಯೆಯಲ್ಲಿ ಮದ್ಯ ನಿಷೇಧಕ್ಕೆ ಆಗ್ರಹ; ಮಾನ್ಯ ಮಾಡಿದ ಯೋಗಿ ಸರಕಾರಕ್ಕೆ ಅಭಿನಂದನೆ !

ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…

2 years ago

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿ

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…

2 years ago