ಬಿಗ್ ಬಾಸ್ ಕನ್ನಡ: ಟಿವಿ ಪರದೆ ಮೇಲೆ ದೊಡ್ಮನೆ ಆಟ ನೋಡಲು ಕಾಯ್ತಿದ್ದ ಪ್ರೇಕ್ಷಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ಬಿಗ್ಬಾಸ್ ಸೀಸನ್ 10ರ ಆರಂಭಕ್ಕೆ ಡೇಟ್ ಫಿಕ್ಸ್ ಆಗಿದೆ. ಅಕ್ಟೋಬರ್ 8ರಿಂದ ಬಿಗ್ ಬಾಸ್ ಸ್ಪರ್ಧಿಗಳ ಆಟ ಶುರುವಾಗಲಿದೆ.
ಊರ ಹಬ್ಬಕ್ಕೆ ಇಲ್ಲಿದೆ ರೀಸನ್; ಶುರುವಾಗ್ತಿದೆ HAPPY ‘BIGG BOSS KANNADA’ ಹತ್ತನೇ ಸೀಸನ್ ಅಕ್ಟೋಬರ್ 8 ರಿಂದ ನೋಡುವುದನ್ನು ಮಿಸ್ ಮಾಡಲೇ ಬೇಡಿ ಎಂದು ಕಲರ್ಸ್ ಕನ್ನಡ ಸೋಶಿಯಲ್ ಮೀಡಿಯಾ ಮೂಲಕ ಅಧಿಕೃತವಾಗಿ ಘೋಷಿಸಿದೆ.
ಊರ ಹಬ್ಬ ಮಾಡಲು ಇಲ್ಲಿದೆ ರೀಸನ್
ಬಿಗ್ ಬಾಸ್ ಪ್ರೋಮೋ ಇತ್ತೀಚಿಗಷ್ಟೇ ರಿಲೀಸ್ ಆಗಿತ್ತು. ಊರ ಹಬ್ಬ ಮಾಡಲು ಇಲ್ಲಿದೆ ರೀಸನ್ ಅದೇ ಶುರುವಾಗ್ತಿದೆ ಬಿಗ್ ಬಾಸ್ ಕನ್ನಡ 10ನೇ ಸೀಸನ್ ಎಂದು ಶುರುವಾಗು ಈ ಪ್ರೋಮೋ ಬಿಗ್ ಬಾಸ್ ಶೋ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿದೆ. ‘ಬಿಗ್ ಬಾಸ್ ಕನ್ನಡ’ ಕಾರ್ಯಕ್ರಮದ ಲೋಗೋ ಪ್ರೊಫೈಲ್ ಪಿಕ್ಚರ್ , ಪ್ರೋಮೋ ಹಾಗೂ ಪ್ರತಿ ಅಪ್ಡೇಟ್ ಅನ್ನು ಕಲರ್ಸ್ ಕನ್ನಡ ವಾಹಿನಿಯ ಅಧಿಕೃತ ಸೋಷಿಯಲ್ ಮೀಡಿಯಾ ಅಕೌಂಟ್‌ಗಳಲ್ಲಿ ಅಪ್‌ಡೇಟ್ ನೀಡಲಾಗುತ್ತಿದೆ.
ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಸ್ಪರ್ಧಿಗಳು ಯಾರು
ಕೆಜಿಎಫ್ ಖ್ಯಾತಿಯ ರೂಪ ರಾಯಪ್ಪ ಸೀಸನ್ 10ರಲ್ಲಿ ಕಾಣಿಸೋಕು ಪಕ್ಕಾ ಎನ್ನುವ ಮಾಹಿತಿ ಹೊರಬಿದ್ದಿದೆ. ಈ ಬಾರಿ ಬಿಗ್ ಮನೆಯಲ್ಲಿ ರಾಜಕಾರಣಿಯೊಬ್ಬರು ಕಾಣಿಸಿಕೊಳ್ಳುವ ಸಾಧ್ಯತೆ ಕೂಡ ಇದೆ. ಖ್ಯಾತ ರಾಜಕಾರಣಿ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ರಾಜಕೀಯ ಮಾಡುವ ಸಾಧ್ಯತೆ ಕೂಡ ಇದೆ ಎನ್ನಲಾಗ್ತಿದೆ. ನಾಗಿಣಿ ಸೀರಿಯಲ್ ಮೂಲಕ ಜನಪ್ರಿಯತೆ ಪಡೆದ ಸೀರಿಯಲ್ ನಟಿ ನಮ್ರತಾ ಗೌಡ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುತ್ತಾ ಜನಪ್ರಿಯತೆ ಪಡೆದ ಭೂಮಿ ಬಸವರಾಜ್ ಹೆಸರು ಬಿಗ್ ಬಾಸ್ ರೇಸ್ ನಲ್ಲಿದೆ.
ನೋಡೋಕೆ ಇದೆ ರೀಸನ್ ಕಿಚ್ಚನ 10ನೇ ಸೀಸನ್!
ಬಿಗ್ ಬಾಸ್ ಮೊದಲ ಸೀಸನ್‌ನಿಂದಲೂ ಒಂದು ಕುತೂಹಲ ಇದ್ದೇ ಇದೆ. ಶೋ ಶುರು ಆಗೊ ಮೊದಲು ಮತ್ತು ಶೋ ಮುಗಿಯೋ ಹಂತಕ್ಕೆ ಇನ್ನಿಲ್ಲದ ಕ್ಯೂರಿಯೋಸಿಟಿ ಕ್ರಿಯೇಟ್ ಆಗಿರುತ್ತದೆ. ನಿತ್ಯವೂ ಬಿಗ್ ಬಾಸ್ ನೋಡೊ ಮನೆ ಮಂದಿಯ ಕ್ರೇಜ್ ಬೇರೆ ಇರುತ್ತದೆ. ವಾರಾಂತ್ಯಕ್ಕೆ ಬರೋ ಕಿಚ್ಚನ ನೋಡೋಕೆ ಅದೆಷ್ಟೋ ಜನ ಕಾಯ್ತಾನೇ ಇರ್ತಾರೆ.
ಬಿಗ್ ಬಾಸ್ ನಲ್ಲಿ ಪ್ರಮುಖ ಆಕರ್ಷಣೆ ಏನು?
ಈ ಒಂದು ಕ್ವಶ್ಚನ್‌ಗೆ ಬರೋ ಉತ್ತರ ಒಂದೇ ಇದೆ. ಅದುವೇ ಕಿಚ್ಚ ಸುದೀಪ್ ಅಂತಲೇ ಹೇಳಬಹುದು. ಬಿಗ್ ಬಾಸ್ ಇಡೀ ಸೀಸನ್ ಹಿಂದೆ ದೊಡ್ಡ ತಂಡವೇ ಇರುತ್ತದೆ. ಆದರೆ ಬಿಗ್ ಬಾಸ್ ಅನ್ನ ಕಿಚ್ಚನಿಗೋಸ್ಕರವೇ ನೋಡುವ ಜನ ಜಾಸ್ತಿ ಇದ್ದಾರೆ.