ವಾಣಿಜ್ಯ ಸುದ್ದಿ

ಅಮೆರಿಕಕ್ಕೆ ಪೆಟ್ರೋಲ್ ಕಾಟ; ಆಗಸ್ಟ್​ನಲ್ಲಿ ಹಣದುಬ್ಬರ ಏರಿಕೆ; ಭಾರತ ಸೇರಿದಂತೆ ಜಾಗತಿಕವಾಗಿ ಏನು ಪರಿಣಾಮ?

ವಾಷಿಂಗ್ಟನ್, ಸೆಪ್ಟೆಂಬರ್ 14: ಅಮೆರಿಕದಲ್ಲಿ ಹಣದುಬ್ಬರ ಏರಿಕೆ ಮುಂದುವರಿದಿದೆ. ಆಗಸ್ಟ್ ತಿಂಗಳಲ್ಲಿ ಹಣದುಬ್ಬರ ಶೇ. 3.7ಕ್ಕೆ ಏರಿದೆ. ಇದು ಒಂದು ವರ್ಷದ ಅವಧಿಯಲ್ಲಿ ಆಗಿರುವ ಹಣದುಬ್ಬರ ಏರಿಕೆ. ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿನ ಬೆಲೆಗೆ ಹೋಲಿಸಿದರೆ ಈ ಆಗಸ್ಟ್​ನಲ್ಲಿ ಆಗಿರುವ ಬೆಲೆ ವ್ಯತ್ಯಯ ಇದಾಗಿದೆ. ಕಳೆದ ತಿಂಗಳಾದ ಜುಲೈನಲ್ಲಿ ಹಣದುಬ್ಬರ ಶೇ. 3.2ರಷ್ಟಿತ್ತು. ಆಗಸ್ಟ್​ನಲ್ಲಿ ಹಣದುಬ್ಬರ ಏರಿಕೆಗೆ ಪ್ರಮುಖವಾಗಿ ಕಾರಣವಾಗಿರುವುದು ಗ್ಯಾಸೋಲಿನ್ ಬೆಲೆ ಏರಿಕೆ. ಗ್ಯಾಸೋಲಿನ್ ಎಂಬುದು ಅಮೆರಿಕದಲ್ಲಿ ಪೆಟ್ರೋಲ್​ಗೆ ಬಳಸುವ ಪದ. ಆಗಸ್ಟ್ ತಿಂಗಳಲ್ಲಿ ಗ್ಯಾಸೋಲಿನ್ ಬೆಲೆ ಬರೋಬ್ಬರಿ ಶೇ. 10.6ರಷ್ಟು ಹೆಚ್ಚಾಗಿ ಹೋಗಿದೆ. ಇದು ಅಮೆರಿಕದಲ್ಲಿ ನಿರೀಕ್ಷೆಮೀರಿದ ಮಟ್ಟಕ್ಕೆ ಹಣದುಬ್ಬರ ಏರಿಕೆಗೆ ಎಡೆ ಮಾಡಿಕೊಟ್ಟಿದೆ.

Advertisement
Advertisement
Advertisement

ಗ್ಯಾಸೋಲಿನ್ ಬೆಲೆ ಮಾತ್ರವೇ ಅಮೆರಿಕ ಪಾಲಿಗೆ ವಿಲನ್ ಅಗಿರುವುದು. ಭಾರತದ ಹಣದುಬ್ಬರ ಎತ್ತರದಲ್ಲಿರಲು ಕಾರಣವಾಗಿರುವ ಆಹಾರವಸ್ತುಗಳ ಬೆಲೆ ಅಮೆರಿಕದಲ್ಲಿ ಅಷ್ಟೇನೂ ಕಾಡಿಲ್ಲ. ಅಲ್ಲಿ ಆಹಾರ ಬೆಲೆ ಕೇವಲ ಶೇ. 0.2 ಮಾತ್ರವೇ ಏರಿದೆ. ಇನ್ನು, ದಿನಸಿ ವಸ್ತುಗಳ ಬೆಲೆ ಏರಿಕೆಯೂ ಶೇ. 0.2 ಮಾತ್ರವೇ ಇದೆ. ಕಳೆದ ವರ್ಷ (2022ರ ಜೂನ್) ಅಮೆರಿಕದಲ್ಲಿ ಹಣದುಬ್ಬರ ಶೇ. 9ಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿತ್ತು. ಕಳೆದ ಒಂದು ವರ್ಷದಿಂದ ಅಲ್ಲಿನ ಹಣದುಬ್ಬರ ಪ್ರಮಾಣ ಸಾಕಷ್ಟು ಕಡಿಮೆ ಆಗಿದೆ.

ಅಮೆರಿಕದ ಹಣದುಬ್ಬರದ ಪರಿಣಾಮಗಳೇನು?

ಅಮೆರಿಕದಲ್ಲಿ ಶೀತವಾದರೆ ಬೇರೆ ದೇಶಗಳಿಗೆ ನೆಗಡಿ ಆಗುತ್ತದೆ ಎನ್ನುವ ಮಾತಿನಂತೆ, ವಿಶ್ವದ ದೊಡ್ಡಣ್ಣನ ಮನೆಯಲ್ಲಿ ನಡೆಯುವ ವಿದ್ಯಮಾನ ಬೇರೆ ದೇಶಗಳ ಮೇಲೆ ಪರಿಣಾಮ ಬೀರುವುದು ನಿಜ. ಈಗ ಅಮೆರಿಕದಲ್ಲಿ ಹಣದುಬ್ಬರ ಹೆಚ್ಚಾದರೆ ಬೇರೆ ಕಡೆ ಆಗುವ ಪರಿಣಾಮಗಳೇನು ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿ ನೀಡಬಹುದು.

ಬಡ್ಡಿ ದರ ಇಳಿಮುಖ ಇಲ್ಲ

ಹಣದುಬ್ಬರ ಹೆಚ್ಚಿದ್ದರೆ ಬ್ಯಾಂಕ್​ನ ಬಡ್ಡಿದರ ಇಳಿಕೆಯಾಗುವ ಸಾಧ್ಯತೆ ಇಲ್ಲ. ಕೆಲವೊಮ್ಮೆ ಬಡ್ಡಿದರ ಹೆಚ್ಚು ಮಾಡಬಹುದು. ಸದ್ಯ ಅಮೆರಿಕ ಮುಂದಿನ ಕೆಲ ತಿಂಗಳು ಬಡ್ಡಿದರ ಹೆಚ್ಚಿಸುವ ಸಾಧ್ಯತೆ ಕಡಿಮೆಯಾದರೂ, ದರ ಇಳಿಸುವ ಸಾಧ್ಯತೆಯೂ ಇಲ್ಲ.

chaithra

Recent Posts

ಹಿಂದೂ ಧರ್ಮರಕ್ಷಣೆಗಾಗಿ ಹಿಂದೂ ರಾಷ್ಟ್ರ ಸ್ಥಾಪನೆಯ ಅವಶ್ಯಕತೆ

ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…

1 year ago

ಹಿಂದೂಗಳ ಜಾಗೃತಿಗಾಗಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿತ ಹಿಂದೂ ರಾಷ್ಟ್ರ-ಜಾಗೃತಿ ಸಭೆ !

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…

1 year ago

ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಅಪಮಾನ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ !

ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…

1 year ago

ಅಯೋಧ್ಯೆಯಲ್ಲಿ ಮದ್ಯ ನಿಷೇಧಕ್ಕೆ ಆಗ್ರಹ; ಮಾನ್ಯ ಮಾಡಿದ ಯೋಗಿ ಸರಕಾರಕ್ಕೆ ಅಭಿನಂದನೆ !

ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…

1 year ago

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿ

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…

1 year ago