ಆರೋಗ್ಯ

ಬೆಂಗಳೂರು: ಮಕ್ಕಳಲ್ಲಿ ಹೆಚ್ಚಾದ ಡೆಂಗ್ಯೂ, ವಾಂತಿ-ಜ್ವರಯಿದ್ದರೆ ನಿರ್ಲಕ್ಷಿಸದಿರಿ

ಬೆಂಗಳೂರು, ಸೆ.14: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ(Bengaluru) ಕಳೆದ ಕೆಲವು ದಿನಗಳಲ್ಲಿ 4,000 ಕ್ಕೂ ಹೆಚ್ಚು ಡೆಂಗ್ಯೂ(Dengue) ಪ್ರಕರಣಗಳು ವರದಿಯಾಗಿವೆ. ಅದರಲ್ಲೂ ಮಕ್ಕಳಲ್ಲಿ ಹೆಚ್ಚಿನ ಪ್ರಮಾಣ ಸೋಂಕು ಕಂಡು ಬಂದಿದ್ದು ಆತಂಕಕ್ಕೆ ಕಾರಣವಾಗಿದೆ. ಡೆಂಗ್ಯೂ ಸೋಂಕಿನಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಯ ಕುರಿತು ಆರೋಗ್ಯ ಇಲಾಖೆ ಇದುವರೆಗೂ ಡೇಟಾವನ್ನು ಬಿಡುಗಡೆ ಮಾಡಿಲ್ಲ. ಆದರೆ ತೀವ್ರ ಜ್ವರದಿಂದ ಬಳಲುತ್ತಿರುವ ಮಕ್ಕಳು ಆಸ್ಪತ್ರೆಗೆ ದಾಖಲಾಗುತ್ತಿರುವ ಸಂಖ್ಯೆ ಹೆಚ್ಚಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

Advertisement
Advertisement
Advertisement

ಕಳೆದ ಕೆಲವು ದಿನಗಳಿಂದ 103 ಡಿಗ್ರಿ, 104 ಡಿಗ್ರಿ ಜ್ವರದಿಂದ ಬಳಲುತ್ತಿರುವ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಪ್ರಸ್ತುತ ನಮ್ಮ ವಾರ್ಡ್‌ಗಳಲ್ಲಿ 12 ಮಕ್ಕಳು ಡೆಂಗ್ಯೂ ಪೀಡಿತರಾಗಿದ್ದಾರೆ ಎಂದು ಆತ್ರೇಯಾ ಆಸ್ಪತ್ರೆಯ ಸಂಸ್ಥಾಪಕ ಮತ್ತು ವೈದ್ಯಕೀಯ ನಿರ್ದೇಶಕ ಡಾ.ನಾರಾಯಣಸ್ವಾಮಿ ತಿಳಿಸಿದರು.

ತಣ್ಣನೆಯ ಕೈಗಳು ಮತ್ತು ಪಾದಗಳು ಗಂಭೀರ ಅನಾರೋಗ್ಯದ ಸಂಕೇತವಾಗಬಹುದು. ಈಡಿಸ್‌ ಎಂಬ ಸೊಳ್ಳೆಗಳಿಂದ ಹರಡುವ ವೈರಲ್‌ ಸೋಂಕಿನಿಂದ ಡೆಂಗ್ಯೂ ಉಂಟಾಗುತ್ತದೆ. ಅಧಿಕ ಜ್ವರ ಹಾಗು ದೇಹದಲ್ಲಿ ನೋವು ಡೆಂಗ್ಯೂವಿನ ರೋಗಲಕ್ಷಣಗಳು. ಡೆಂಗ್ಯೂ ನಿರ್ಣಾಯಕ ಹಂತವನ್ನು ತಲುಪಿದ ನಂತರ, ರಕ್ತನಾಳಗಳಲ್ಲಿನ ದ್ರವಗಳು ಸೋರಿಕೆಯಾಗಲು ಪ್ರಾರಂಭಿಸುತ್ತವೆ. ಅದರ ಪರಿಣಾಮವಾಗಿ, ರಕ್ತವು ಕೇಂದ್ರೀಕೃತವಾಗಿರುತ್ತದೆ ಮತ್ತು ಪರಿಚಲನೆ ನಿಧಾನವಾಗುತ್ತದೆ. ಈ ಕಾರಣದಿಂದಾಗಿ ಪಾದ, ಮೂಗಿನ ತುದಿ, ಅಂಗೈಗಳಿಗೆ ಸಮರ್ಪಕವಾಗಿ ರಕ್ತ ಪೂರೈಕೆ ಆಗುವುದಿಲ್ಲ. “ನೀವು ನಿಮ್ಮ ಮಗುವಿನ ಕೈಯನ್ನು ನಿಮ್ಮ ಬೆರಳುಗಳಿಂದ ಹಿಸುಕಿದರೆ ಮತ್ತು ಮೂರು ಸೆಕೆಂಡುಗಳ ನಂತರ ಅದನ್ನು ಬಿಟ್ಟರೆ, ಸಾಮಾನ್ಯ ಬಣ್ಣವು ಹಿಂತಿರುಗದ ಕಾರಣ ನೀವು ಗುರುತುಗಳನ್ನು ಗಮನಿಸಬಹುದು. ಇದರಿಂದ ನಿಮ್ಮ ಮಗುವಿನ ಕೈಗೆ ರಕ್ತ ಸರಿಯಾದ ರೀತಿಯಲ್ಲಿ ಪೂರೈಕೆಯಾಗುತ್ತಿಲ್ಲ ಎಂಬುದನ್ನು ಗಮನಿಸಬಹುದು. ಮತ್ತು ಮಗುವಿಗೆ ಕಣ್ಣುಗಳ ಸುತ್ತ ಪಫಿನೆಸ್ ಅಥವಾ ಹೊಟ್ಟೆ ನೋವು ಕಾಣಿಸುತ್ತದೆ. ಆಗ ರಕ್ತ ಪರೀಕ್ಷೆ ಮಾಡಿಸಲೇ ಬೇಕು. ನಿರ್ಲಕ್ಷ್ಯ ಮಾಡುವಂತಿಲ್ಲ ಎಂದು DHEE ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಹಿರಿಯ ಸಲಹೆಗಾರ ಶಿಶುವೈದ್ಯರು ಮತ್ತು ಮಕ್ಕಳ ತಜ್ಞರು ಆದ ಡಾ ಸುಪ್ರಜಾ ಚಂದ್ರಶೇಖರ್ ತಿಳಿಸಿದರು.

ಮೂರು ಅಥವಾ ಹೆಚ್ಚು ಬಾರಿ ವಾಂತಿ ಆಗುವುದು, ಅಲರ್ಜಿ, ಅಥವಾ ರಕ್ತಸ್ರಾವದಂತಹ ರೋಗಲಕ್ಷಣಗಳು ಕಂಡು ಬಂದರೆ ನಿರ್ಲಕ್ಷಿಸಬಾರದು. ಇಂತಹ ರೋಗಲಕ್ಷಣಗಳಿರುವ ಮಕ್ಕಳಿಗೆ ಚಿಕಿತ್ಸೆ ಅಗತ್ಯ. ಇನ್ನು ಚಿಕಿತ್ಸೆ ಶುರು ಮಾಡಿ ಐದನೇ ದಿನದ ನಂತರವೂ ಜ್ವರ ಕಡಿಮೆಯಾಗದಿದ್ದರೆ, ಮಗುವನ್ನು ಆಸ್ಪತ್ರೆಗೆ ದಾಖಲಿಸಬೇಕು ಎಂದರು.

chaithra

Recent Posts

ಹಿಂದೂ ಧರ್ಮರಕ್ಷಣೆಗಾಗಿ ಹಿಂದೂ ರಾಷ್ಟ್ರ ಸ್ಥಾಪನೆಯ ಅವಶ್ಯಕತೆ

ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…

2 years ago

ಹಿಂದೂಗಳ ಜಾಗೃತಿಗಾಗಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿತ ಹಿಂದೂ ರಾಷ್ಟ್ರ-ಜಾಗೃತಿ ಸಭೆ !

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…

2 years ago

ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಅಪಮಾನ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ !

ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…

2 years ago

ಅಯೋಧ್ಯೆಯಲ್ಲಿ ಮದ್ಯ ನಿಷೇಧಕ್ಕೆ ಆಗ್ರಹ; ಮಾನ್ಯ ಮಾಡಿದ ಯೋಗಿ ಸರಕಾರಕ್ಕೆ ಅಭಿನಂದನೆ !

ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…

2 years ago

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿ

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…

2 years ago