ವಾಣಿಜ್ಯ ಸುದ್ದಿ

ವ್ಯಾಪಾರ ವಿಷಯದಲ್ಲಿ ಪಾಶ್ಚಿಮಾತ್ಯ ದೇಶಗಳು ಕೆಟ್ಟವೆಂಬ ಪರಿಕಲ್ಪನೆ ನೀಗಬೇಕು: ಎಸ್ ಜೈಶಂಕರ್ ಕರೆ

ನವದೆಹಲಿ, ಸೆ.18: ಜಾಗತಿಕ ವ್ಯಾಪಾರ ವಿಚಾರಕ್ಕೆ ಬಂದರೆ ಪಾಶ್ಚಿಮಾತ್ಯ ದೇಶಗಳು ಕೆಟ್ಟವೆಂಬ ದೃಷ್ಟಿಕೋನ ಇದೆ. ಇದು ಬದಲಾಗಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಕರೆ ನೀಡಿದ್ದಾರೆ. ಮಲಯಾಳಂನ ಏಷ್ಯಾನೆಟ್ ಸುದ್ದಿವಾಹಿನಿಯೊಂದಿಗಿನ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಅವರು, ಈಗ ಪಶ್ಚಿಮದಿಂದ ಏಷ್ಯಾ ಮತ್ತು ಆಫ್ರಿಕನ್ ಮಾರುಕಟ್ಟೆಗಳಿಗೆ ದೊಡ್ಡ ಪ್ರಮಾಣದಲ್ಲಿ ಸರಕುಗಳು ಬಂದು ಬೀಳುತ್ತಿಲ್ಲ. ಪಶ್ಚಿಮವನ್ನು ನಕಾರಾತ್ಮಕವಾಗಿ ನೋಡುವ ಧೋರಣೆ ಬದಲಾಗುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Advertisement
Advertisement
Advertisement

‘ಏಷ್ಯಾ ಮತ್ತು ಆಫ್ರಿಕಾಗೆ ದೊಡ್ಡ ಪ್ರಮಾಣದಲ್ಲಿ ಸರಕು ತಂದುಹಾಕುತ್ತಿರುವುದು ಪಶ್ಚಿಮವಲ್ಲ. ಪಶ್ಚಿಮದವರು ಕೆಟ್ಟವರು, ಅಭಿವೃದ್ಧಿಶೀಲ ದೇಶಗಳು ಒಳ್ಳೆಯವು ಎಂಬ ಹಿಂದಿನ ಪರಿಕಲ್ಪನೆಯನ್ನು ಕಳಚಿಕೊಳ್ಳುವ ಅವಶ್ಯಕತೆ ಇದೆ ಎಂಬುದು ನನ್ನ ಭಾವನೆ. ಈ ಜಗತ್ತು ಹೆಚ್ಚು ಸಂಕೀರ್ಣವಾಗಿದೆ. ಇದಕ್ಕಿಂತಲೂ ಸಮಸ್ಯೆಗಳು ಇನ್ನೂ ಹೆಚ್ಚು ಸಂಕೀರ್ಣವಾಗಿವೆ’ ಎಂದು ಜೈಶಂಕರ್ ಹೇಳಿದ್ದಾರೆ.

ಚೀನಾವನ್ನು ತರಾಟೆಗೆ ತೆಗೆದುಕೊಂಡ ಜೈಶಂಕರ್

ಈ ಬಾರಿಯ ಜಿ20 ಶೃಂಗಸಭೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಗೈರಾಗಿರುವುದಕ್ಕೆ ಕಾರಣವೇನಿರಬಹುದು ಎಂಬ ಪ್ರಶ್ನೆಗೆ ಜೈಶಂಕರ್ ಮಾರ್ಮಿಕವಾಗಿ ಉತ್ತರ ನೀಡಿದ್ದಾರೆ.

‘ಕಳೆದ 15-20 ವರ್ಷಗಳಲ್ಲಿ ಜಾಗತೀಕರಣದ ಅಸಮಾನತೆಯಿಂದಾಗಿ ತೀವ್ರಮಟ್ಟದಲ್ಲಿ ಅಸಮಾಧಾನ ಮಡುಗಟ್ಟುತ್ತಾ ಬಂದಿದೆ. ತಮ್ಮ ಮಾರುಕಟ್ಟೆಗಳಿಗೆ ಬಹಳ ಅಗ್ಗದ ಸರಕುಗಳು ಬಂದು ಬೀಳುತ್ತಿರುವುದು ಬಹಳ ದೇಶಗಳಿಗೆ ಕಿರಿಕಿರಿಯಾಗುತ್ತಿದೆ,’ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರು ಚೀನಾವನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ತಾನು ಪಾಶ್ಚಿಮಾತ್ಯ ದೇಶಗಳ ಪರವಾಗಿ ಮಾತನಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಇವತ್ತಿನ ಜಾಗತೀಕರಣದಲ್ಲಿ ಸಬ್ಸಿಡಿ ಇತ್ಯಾದಿ ಮೂಲಕ ಉತ್ಪಾದನೆಯು ಒಂದೇ ಕಡೆ ಕೇಂದ್ರಿತವಾಗಿದೆ. ಇದರಿಂದ ಹಲವು ದೇಶಗಳ ಆರ್ಥಿಕತೆಗೆ ಭಂಗವಾಗುತ್ತಿದೆ ಎಂದಿದ್ದಾರೆ.

ಹಲವು ವರ್ಷಗಳಿಂದ ಇದ್ದ ಅಸಮಾಧಾನದ ಜೊತೆಗೆ ಕೋವಿಡ್ ಹಾಗೂ ಉಕ್ರೇನ್ ಬಿಕ್ಕಟ್ಟು ಜಾಗತಿಕವಾಗಿ ಇಂಧನ ಮತ್ತು ಆಹಾರವಸ್ತುಗಳ ಬೆಲೆ ಹೆಚ್ಚಲು ಕಾರಣವಾಗಿದೆ ಎಂದ ಎಸ್ ಜೈಶಂಕರ್ ಅವರು, ಉತ್ಪಾದನೆ, ಕೃಷಿ, ವಿಜ್ಞಾನ, ಲಸಿಕೆ ಇತ್ಯಾದಿಯಲ್ಲಿ ಭಾರತದ ಸಾಧನೆಯು ಜಾಗತಿಕ ದಕ್ಷಿಣ ದೇಶಗಳಲ್ಲಿ ಒಂದು ರೀತಿಯ ಆಪ್ತ ಭಾವನೆ ಮೂಡಿದೆ. ತಮ್ಮ ಪೈಕಿಯವರೊಬ್ಬರು ನಿಂತು, ಬೆಳೆಯಬಲ್ಲ ಸಾಮರ್ಥ್ಯ ಹೊಂದಿದ್ದಾರೆ ಎಂದು ಈ ದೇಶಗಳು ಭಾವಿಸಿವೆ ಎಂದು ಹೇಳಿದ್ದಾರೆ.

chaithra

Recent Posts

ಹಿಂದೂ ಧರ್ಮರಕ್ಷಣೆಗಾಗಿ ಹಿಂದೂ ರಾಷ್ಟ್ರ ಸ್ಥಾಪನೆಯ ಅವಶ್ಯಕತೆ

ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…

1 year ago

ಹಿಂದೂಗಳ ಜಾಗೃತಿಗಾಗಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿತ ಹಿಂದೂ ರಾಷ್ಟ್ರ-ಜಾಗೃತಿ ಸಭೆ !

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…

1 year ago

ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಅಪಮಾನ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ !

ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…

1 year ago

ಅಯೋಧ್ಯೆಯಲ್ಲಿ ಮದ್ಯ ನಿಷೇಧಕ್ಕೆ ಆಗ್ರಹ; ಮಾನ್ಯ ಮಾಡಿದ ಯೋಗಿ ಸರಕಾರಕ್ಕೆ ಅಭಿನಂದನೆ !

ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…

1 year ago

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿ

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…

1 year ago