ಮನೋರಂಜನೆ

ಅಣ್ಣನ ಸಮಾಧಿ ಬಳಿ ಪತ್ನಿಗೆ ಸೀಮಂತ ಶಾಸ್ತ್ರ ಮಾಡಿದ ಧ್ರುವ ಸರ್ಜಾ;ಫೋಟೋ ವೈರಲ್

ಸ್ಯಾಂಡಲ್​ವುಡ್​ನ ಖ್ಯಾತ ನಟ ಧ್ರುವ ಸರ್ಜಾ ಅವರ ಮನೆಯಲ್ಲಿ ಸಂತಸದ ವಾತಾವರಣ ನಿರ್ಮಾಣ ಆಗಿದೆ. ಅವರ ಪತ್ನಿ ಪ್ರೇರಣಾ ಈಗ ತುಂಬು ಗರ್ಭಿಣಿ. ಧ್ರುವ ಸರ್ಜಾ ಮತ್ತು ಪ್ರೇರಣಾ ಅವರು ಎರಡನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ತಾವು ಮತ್ತೆ ತಂದೆ ಆಗುತ್ತಿರುವ ವಿಷಯವನ್ನು ಧ್ರುವ ಸರ್ಜಾ ಅವರು ಇತ್ತೀಚೆಗಷ್ಟೇ ರಿವೀಲ್​ ಮಾಡಿದ್ದರು. ಈಗ ಬಹಳ ಸಂಭ್ರಮದಿಂದ ಪ್ರೇರಣಾ ಅವರ ಸೀಮಂತ ಶಾಸ್ತ್ರ ಮಾಡಲಾಗಿದೆ. ಕುಟುಂಬದವರು ಮತ್ತು ಆಪ್ತರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಆ ಸಂದರ್ಭದ ವಿಡಿಯೋವನ್ನು ಧ್ರುವ ಸರ್ಜಾ ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಶುಭ ಕೋರಿದ್ದಾರೆ.

Advertisement
Advertisement
Advertisement

ಇತ್ತೀಚೆಗೆ ಎಲ್ಲ ಕಡೆಗಳಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಖುಷಿಯಿಂದ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಧ್ರುವ ಸರ್ಜಾ ಅವರ ಕುಟುಂಬದರು ಪ್ರೇರಣಾಗೆ ಸೀಮಂತ ಶಾಸ್ತ್ರ ನೆರವೇರಿಸಿದ್ದಾರೆ. ಹಾಗಾಗಿ ಈ ಬಾರಿಯ ಕೃಷ್ಣ ಜನ್ಮಾಷ್ಟಮಿ ತಮ್ಮ ಪಾಲಿಗೆ ತುಂಬ ಸ್ಪೆಷಲ್​ ಆಗಿತ್ತು ಎಂದು ಧ್ರುವ ಸರ್ಜಾ ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ವಿಡಿಯೋ ಹಂಚಿಕೊಂಡ ಕೆಲವೇ ನಿಮಿಷಗಳಲ್ಲಿ ಸಾವಿರಾರು ಅಭಿಮಾನಿಗಳು ಲೈಕ್​ ಮಾಡಿದ್ದಾರೆ. ಕಮೆಂಟ್​ಗಳ ಮೂಲಕ ಶುಭಾಶಯ ತಿಳಿಸಲಾಗಿದೆ.

ಧ್ರುವ ಸರ್ಜಾ ಸಹೋದರ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡಿದ್ದು ಆ ಕುಟುಂಬಕ್ಕೆ ಆದಂತಹ ದೊಡ್ಡ ನಷ್ಟ. ಪ್ರತಿ ಕ್ಷಣವೂ ಚಿರು ನೆನಪು ಕಾಡುತ್ತದೆ. ವಿಶೇಷ ಸಂದರ್ಭಗಳಲ್ಲಿ ಚಿರುಗೆ ಕುಟುಂಬದವರು ನಮನ ಸಲ್ಲಿಸುತ್ತಾರೆ. ಈಗ ಪ್ರೇರಣಾ ಅವರ ಸೀಮಂತ ಸಮಾರಂಭದಲ್ಲೂ ಚಿರು ನೆನಪನ್ನು ಮಾಡಿಕೊಳ್ಳಲಾಗಿದೆ. ಚಿರಂಜೀವಿ ಅವರ ಸಮಾಧಿ ಇರುವ ಫಾರ್ಮ್​ ಹೌಸ್​ನಲ್ಲೇ ಸೀಮಂತ ನಡೆದಿದೆ. ಇಡೀ ಫಾರ್ಮ್​ ಹೌಸ್​ ಸಿಂಗಾರಗೊಂಡಿತ್ತು. ಬಂಧು-ಬಳಗದವರು ಆಗಮಿಸಿ ಪ್ರೇರಣಾಗೆ ಆಶೀರ್ವಾದ ಮಾಡಿದ್ದಾರೆ.

ಧ್ರುವ ಅವರು ಈ ಕಾರ್ಯಕ್ರಮವನ್ನು ದೊಡ್ಡ ಹೋಟೆಲ್​ನಲ್ಲಿ ಮಾಡಬಹುದು. ಆದರೆ ಅವರು ಅಣ್ಣನ ಸಮಾಧಿ ಹತ್ತಿರ ಮಾಡಿದ್ದಾರೆ. ಅವರಿಗೆ ಅಣ್ಣನ ಮೇಲೆ ಇರುವ ಪ್ರೀತಿ ಯಾವಾಗಲೂ ಶಾಶ್ವತ’ ಎಂದು ಫ್ಯಾನ್ಸ್​ ಕಮೆಂಟ್​ ಮಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಧ್ರುವ ಸರ್ಜಾ ಅವರು ಬ್ಯುಸಿ ಆಗಿದ್ದಾರೆ. ‘ಮಾರ್ಟಿನ್​’, ‘ಕೆಡಿ’ ಮುಂತಾದ ಸಿನಿಮಾಗಳ ಕೆಲಸಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಧ್ರುವ ಮತ್ತು ಪ್ರೇರಣಾ ಅವರು 2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ದಂಪತಿಗೆ 2022ರ ಅಕ್ಟೋಬರ್​ನಲ್ಲಿ ಹೆಣ್ಣು ಮಗು ಜನಿಸಿತು.

chaithra

Recent Posts

ಹಿಂದೂ ಧರ್ಮರಕ್ಷಣೆಗಾಗಿ ಹಿಂದೂ ರಾಷ್ಟ್ರ ಸ್ಥಾಪನೆಯ ಅವಶ್ಯಕತೆ

ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…

1 year ago

ಹಿಂದೂಗಳ ಜಾಗೃತಿಗಾಗಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿತ ಹಿಂದೂ ರಾಷ್ಟ್ರ-ಜಾಗೃತಿ ಸಭೆ !

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…

1 year ago

ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಅಪಮಾನ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ !

ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…

1 year ago

ಅಯೋಧ್ಯೆಯಲ್ಲಿ ಮದ್ಯ ನಿಷೇಧಕ್ಕೆ ಆಗ್ರಹ; ಮಾನ್ಯ ಮಾಡಿದ ಯೋಗಿ ಸರಕಾರಕ್ಕೆ ಅಭಿನಂದನೆ !

ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…

1 year ago

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿ

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…

1 year ago